ಒಡೆಯರ್ ಸ್ಪರ್ಧೆಯಿಂದ ೬-೮ ಕ್ಷೇತ್ರಗಳ ಮೇಲೆ ಪ್ರಭಾವ

Impact on 6-8 constituencies from Wadiyar competition
Published on

ಮಡಿಕೇರಿ:

ಕೊಡಗು - ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಆಯ್ಕೆ ಹಿಂದೆ ಪಕ್ಷದ ಹಿರಿಯರ ಹಲವು ರೀತಿಯ ಲೆಕ್ಕಾಚಾರ ಅಡಗಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ ಹೇಳಿದರು. ಒಡೆಯರ್ ಅವರು ಇಲ್ಲಿ ಅಭ್ಯರ್ಥಿ ಆಗುತ್ತಿರುವುದು ಹಳೆ ಮೈಸೂರು ಭಾಗದ ೬-೮ ಕ್ಷೇತ್ರಗಳ ಮೇಲೆ ಪ್ರಭಾವ ಬೀರಲಿದೆ. ಇದರಿಂದ ಮೈಸೂರು ಸಂಸ್ಥಾನದ ರಾಮ ರಾಜ್ಯ ಪರಂಪರೆ ಮುಂದುವರಿಸಲು ಅನುಕೂಲ ಆಗಲಿದೆ. ಸಾಮಾಜಿಕ ನ್ಯಾಯ ಪ್ರತಿಬಿಂಬಿಸಲು ಈ ಸ್ಪರ್ಧೆ ನಡೆಯುತ್ತಿದ್ದು, ಈ ಸ್ಪರ್ಧೆ ಸಂಚಲನ ಮೂಡಿಸಿದೆ. ಹಿಂದುಳಿದ ವರ್ಗಗಳು ಒಡೆಯರ್ ಅವರನ್ನು ಬೆಂಬಲಿಸಬೇಕು ಎಂದು ಶುಕ್ರವಾರ ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅ ಬಿಟ್ಟು ಹಿಂದ ಮಾತ್ರ ಉಳಿಸಿಕೊಂಡಿದ್ದಾರೆ. ಹಿಂದುಳಿದ ವರ್ಗಗಳನ್ನು ಕಡೆಗಣಿಸಲಾಗಿದೆ. ಹಿಂದುಳಿದ ವರ್ಗಗಳ ವಿವಿಧ ನಿಗಮಗಳಿಗೆ ಬೀಗ ಹಾಕಲು ಸಂಚು ನಡೆದಿದೆ. ಯಾವ ನಿಗಮಕ್ಕೂ ಸರ್ಕಾರದ ಯಾವುದೇ ಅನುದಾನ ಬಂದಿಲ್ಲ. ಹಿಂದಿನ ಬಿಜೆಪಿ ಸರ್ಕಾರಕ್ಕೆ ಹೋಲಿಸಿದರೆ ಬಜೆಟ್‌ನಲ್ಲೂ ಅನುದಾನ ತೆಗೆದಿಟ್ಟಿಲ್ಲ. ಹಿಂದುಳಿದ ವರ್ಗಗಳ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಕಲ್ಲು ಹಾಕಿದೆ. ಸರ್ಕಾರ ಬಜೆಟ್‌ನಲ್ಲಿ ಗೋಷಿಸಿದ್ದ ಅನುದಾನ ಬಿಡುಗದೆ ಮಾಡಬೇಕು. ಇಲ್ಲದಿದ್ದರೆ ಜನರ ಮುಂದೆ ವಿಷಯ ತೆಗೆದುಕೊಂಡು ಹೊಗಲಾಗುವುದು ಎಂದರು.

ಕಾರ್ಯದರ್ಶಿ ಸೋಮಶೇಖರ್, ಪ್ರಮುಖರಾದ ವಿಠಲ ಪೂಜಾರಿ, ಜಿಲ್ಲಾಧ್ಯಕ್ಷ ಅಪ್ರು ರವೀಂದ್ರ ವಿನೋದ್ ಪೂಜಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net