ನಿರೋಧಕ ಶಕ್ತಿ ವೃದ್ಧಿಸುವ ಇಂದ್ರಧನುಷ್ ಲಸಿಕೆ

08 Ylb 03
ಯಲಬುರ್ಗಾ ತಾಲೂಕಿನ ಸಂಕನೂರಿನಲ್ಲಿ ಹಮ್ಮಿಕೊಂಡಿದ್ದ ಮಿಷನ್ ಇಂದ್ರಧನುಷ್ 5.0 ಅಭಿಯಾನ ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಂಕ್ರಣ್ಣ ಅಂಗಡಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಬಸವಣ್ಣೆವ್ವ ಕಟ್ಟಿಮನಿ, ಸಿಎಚ್‌ಒ ಜಗದೀಶ, ಗಣ್ಯರಾದ ಖಾಜೆ ಸಾಬ್ ಅಮರಾವತಿ, ಶ್ರೀದೇವಿ ಕಂಬಳಿ ಇದ್ದರು.
Published on

ಯಲಬುರ್ಗಾ: ಐದು ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರಿಗೆ ದಡಾರ, ರುಬೆಲ್ಲಾದಂತಹ ಗಂಭೀರ ಕಾಯಿಲೆಗಳ ನಿರೋಧಕ ಶಕ್ತಿ ನೀಡಲು ಇಂದ್ರಧನುಷ್ 5.0 ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಂಕ್ರಣ್ಣ ಅಂಗಡಿ ಹೇಳಿದರು.

ತಾಲೂಕಿನ ಸಂಕನೂರು ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮಿಷನ್ ಇಂದ್ರಧನುಷ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳಿಗೆ ದಡಾರ, ರುಬೆಲ್ಲಾ ನಿರ್ಮೂಲನೆ ಮಾಡಲು ಲಸಿಕೆ ನೀಡಲಾಗುತ್ತಿದೆ. ಇನ್ನಿತರ ರೋಗಗಳ ನಿರೋಧಕ ಶಕ್ತಿಯಾಗಿ ಕಾಲಕಾಲಕ್ಕೆ ಲಸಿಕೆ ನೀಡಲಾಗುತ್ತದೆ. ಇದರ ಸದುಪಯೋಗ ಪಡೆಯಬೇಕು.

ಎಲ್ಲರೂ ಆರೋಗ್ಯದ ಕಡೆಗೆ ಗಮನಹರಿಸಿ ಎಂದರು. ಗ್ರಾಪಂ ಅಧ್ಯಕ್ಷೆ ಬಸವಣ್ಣೆವ್ವ ಕಟ್ಟಿಮನಿ, ಸಿಎಚ್‌ಒ ಜಗದೀಶ, ಗಣ್ಯರಾದ ಖಾಜೆಸಾಬ್ ಅಮರಾವತಿ, ಶ್ರೀದೇವಿ ಕಂಬಳಿ, ಮಂಜುಳಾ ಅಂಗಡಿ, ಬಸಮ್ಮ, ಗಂಗಮ್ಮ ಇದ್ದರು.

ಗುನ್ನಾಳ: ತಾಲೂಕಿನ ಗುನ್ನಾಳ ಆರೋಗ್ಯ ಕೇಂದ್ರದಿಂದ ಮಂಗಳವಾರ ಗ್ರಾಮದ ರಾಯರಡ್ಡಿ ಕಾಲನಿಯಲ್ಲಿ ಹಮ್ಮಿಕೊಂಡಿದ್ದ ಮಿಷನ್ ಇಂದ್ರಧನುಷ್ 5.0 ಅಭಿಯಾನಕ್ಕೆ ವೈದ್ಯಾಧಿಕಾರಿ ಲಕ್ಷ್ಮಣ ಕರ್ಲೆ ಚಾಲನೆ ನೀಡದರು.

ಗ್ರಾಪಂ ಉಪಾಧ್ಯಕ್ಷ ಈಶಪ್ಪ ಹಟ್ಟಿ, ಸಿಎಚ್‌ಒ ಅನಸವ್ವ, ಆರೋಗ್ಯ ಸುರಕ್ಷಣಾಧಿಕಾರಿ ಕಾವೇರಿ, ಪ್ರಮುಖರಾದ ಶರಣಪ್ಪ, ರಮೇಶ, ರಾಜಶೇಖರ, ಪ್ರಾಣೇಶ, ಮಹಾಂತೇಶ, ಆರೋಗ್ಯ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net