ಮೂರು ಗಣೇಶ ಮೂರ್ತಿಗಳ ವಿಸರ್ಜನೆ

ph02,ASK,G ಬಾಣಾವರ ಗಣೇಶ ವಿಸರ್ಜನೆ
ಅರಸೀಕೆರೆ ಗ್ರಾಮಾಂತರ ತಾಲೂಕಿನ ಬಾಣಾವರ ಪಟ್ಟಣದ ಮುಸ್ಲಿಂ ಸಮುದಾಯದವರು ಗಣೇಶನಿಗೆ ಮಾಲಾರ್ಪಣೆ ಮಾಡಿದರು.
Published on

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಬಾಣಾವರ ಪಟ್ಟಣದ ಕೋಟೆ ಬಡಾವಣೆಯ ಮೂರು ಭಾಗಗಳಲ್ಲಿ ಪ್ರತಿಷ್ಠಾಪಿಸಿದ್ದ ಮೂರು ಗಣೇಶ ಮೂರ್ತಿಗಳನ್ನು ಪಟ್ಟಣದ ರಾಜ ಬೀದಿಗಳಲ್ಲಿ ಮೆರವಣಿಗೆ ಮಾಡಿ ಮಂಗಳವಾರ ಹೊಸಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.

ಮೆರವಣಿಗೆ ವೇಳೆಯಲ್ಲಿ ಮುಸ್ಲಿಂ ಯುವಕರು 3 ಗಣೇಶ ಮೂರ್ತಿಗಳಿಗೆ ಪುಷ್ಪಹಾರವನ್ನು ಹಾಕಿ ಭಕ್ತಿ ಸಾಮರಸ್ಯ ಮೆರೆದರು. ಅಲ್ಲದೇ ಮೆರವಣಿಗೆಯಲ್ಲಿ ಬಂದಿದ್ದ ನೂರಾರು ಭಕ್ತರಿಗೆ ನೀರು ವಿತರಿಸಿದ ಸೌಹಾರ್ದತೆ ಪ್ರದರ್ಶಿಸಿದರು.

ಗಣೇಶೋತ್ಸವದ ಸಂದರ್ಭದಲ್ಲಿ ಶಾಸಕ ಹಾಗೂ ಗೃಹ ಮಂಡಳಿ ಅಧ್ಯಕ್ಷರೂ ಆದ ಕೆ.ಎಂ.ಶಿವಲಿಂಗೇಗೌಡ ಭಾಗವಹಿಸಿ ಗಣೇಶ ಮೂರ್ತಿಗೆ ಮಾಲಾರ್ಪಮಾಡಿದರು. ಇದೇ ವೇಳೆ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ ಯುವಕರ ಜತೆ ಶಾಸಕರೂ ಹೆಜ್ಜೆ ಹಾಕಿದರು.

ಯಾವುದೇ ರೀತಿಯ ಆಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಮುಂಜಾಗ್ರತ ಕ್ರಮ ಅನುಸರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net