ಸಂಗಮದಲ್ಲಿ ಗೌರಿಗಣೇಶ ಮೂರ್ತಿ ವಿಸರ್ಜನೆ

bagamandala
Published on

ಮಡಿಕೇರಿ: ಶ್ರೀ ವಿನಾಯಕ ಟ್ರಸ್ಟ್ ಭಾಗಮಂಡಲ ಇವರ ವತಿಯಿಂದ ೩೨ನೇ ವರ್ಷದ ಗೌರಿ ಗಣೇಶೋತ್ಸವ ಅದ್ಧೂರಿಯಾಗಿ ನಡೆಯಿತು.

ಗಣೇಶನ ವಿಗ್ರಹ ಪ್ರತಿಷ್ಠಾಪನೆ ನಂತರ ಭಗಂಡೇಶ್ವರ ದೇವಾಲಯದಲ್ಲಿ ಟ್ರಸ್ಟ್ ವತಿಯಿಂದ ಮಹಾಗಣಪತಿ ವಿಶೇಷ ಸೇವೆ, ಮಧ್ಯಾಹ್ನ ಮಹಾಪೂಜೆಯ ನಂತರ ಅನ್ನಸಂತರ್ಪಣೆ ನಡೆಯಿತು. ಸಂಜೆ ವಿನಾಯಕನಿಗೆ ರಂಗಪೂಜೆ, ರಾತ್ರಿ ಭಜನೆ, ಮಂಗಳಾರತಿ ಕಾರ್ಯಕ್ರಮ ನಡೆದವು. ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.

ಗಣೇಶೋತ್ಸವ ಪ್ರಯುಕ್ತ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಶೀರ್ಷಿಕೆಯಲ್ಲಿ ಶಾಲಾ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರ ಶ್ರೀ ವಿನಾಯಕ ಟ್ರಸ್ಟ್ ಹಾಗೂ ಸದಾಶಿವ ಶಿವಣ್ಣನವರ್ ಮತ್ತು ಸ್ನೇಹಿತರ ಸಹ ಪ್ರಯೋಜಕತ್ವದಲ್ಲಿ ಏರ್ಪಡಿಸಲಾಗಿತ್ತು. ರಸಪ್ರಶ್ನೆ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಹುಮ್ಮಸ್ಸಿನಿಂದ ಪಾಲ್ಗೊಂಡಿದ್ದರು. ಅಟಲ್ ಬಿಹಾರಿ ವಾಜಿಪೇಯಿ ಶಾಲಾ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಮೂಡಿಗೆರಿಸಿಕೊಂಡರು. ಶ್ರೀ ರಾಜ ರಾಜೇಶ್ವರಿ ಶಾಲೆ(ದ್ವಿ), ಶ್ರೀ ರಾಜ ರಾಜೇಶ್ವರಿ ಶಾಲೆ(ತೃ), ಜ್ಞಾನೋದಯ ಶಾಲೆ ಕೋರಂಗಾಲ ಚತುರ್ಥ ಬಹುಮಾನ ಪಡೆದುಕೊಂಡಿತ್ತು. ಉಳಿದ ೬ ತಂಡಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

ಶನಿವಾರ ಅಲಂಕೃತ ಮಂಟಪದಲ್ಲಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಸಾಗಿ ತ್ರಿವೇಣಿ ಸಂಗಮದಲ್ಲಿ ವಿಸರ್ಜನೆ ಕಾರ್ಯ ನೆರವೇರಿತು. ಕಾರ್ಯಕ್ರಮಕ್ಕೆ ಸ್ಥಳೀಯ ಸಂಘ ಸಂಸ್ಥೆಗಳು, ಊರಿನ ಮುಖಂಡರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net