ಗೌರಿಗಣೇಶ ಮೂರ್ತಿ ವಿಸರ್ಜನೆ

kudige ganesha
Published on

ಕೂಡಿಗೆ: ಕೂಡಿಗೆ ಸಮೀಪದ ಮಲ್ಲೇನಹಳ್ಳಿ ಗ್ರಾಮದಲ್ಲಿರುವ ಭೈರವೇಶ್ವರ ಯುವಕರ ಸಂಘದ ವತಿಯಿಂದ ೧೦ನೇ ವರ್ಷದ ಗೌರಿ ಗಣೇಶೋತ್ಸವ ಬಹಳ ಅದ್ಧೂರಿಯಾಗಿ ನೆರವೇರಿತು.

ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳು, ಕಿರಿಯರು, ಹಿರಿಯರು ಎನ್ನದೆ ಜಾತಿ ಭೇದ ಮರೆತು ಎಲ್ಲರೂ ಪಾಲ್ಗೊಂಡು ಸಂಭ್ರಮಿಸಿದರು. ವಿದ್ಯುತ್ ದೀಪಾಲಂಕಾರ ನೆರೆದಿದ್ದ ಭಕ್ತರ ಗಮನ ಸೆಳೆಯಿತು. ನೂರಾರು ಭಕ್ತರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ನಂತರ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನೆರವೇರಿತು.

ಈ ಸಂದರ್ಭದಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ಸದ್ಯಸ ಟಿ.ಪಿ.ಹಮೀದ್ ಮಾತನಾಡಿ, ಸಮಾಜದ ಜನರನ್ನು ಒಂದೆಡೆ ಬೆರೆಸಲು ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಹಕಾರಿಯಾಗಿದೆ. ಜಾತಿ ಭೇದ ಮರೆತು ಎಲ್ಲರೂ ಒಂದಾಗಿ ಕಳೆದ ಹತ್ತು ವರ್ಷಗಳಿಂದ ಭೈರವೇಶ್ವರ ಯುವಕರ ಸಂಘದ ವತಿಯಿಂದ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದರು.

ನಂತರ ನೆರೆದಿದ್ದ ಭಕ್ತಾದಿಗಳಿಗೆ ಮಹಾಮಂಗಳಾರತಿ ಹಾಗೂ ಅನ್ನ ಸಂತರ್ಪಣ ಕಾರ್ಯಕ್ರಮ ನೆರವೇರಿತು. ಗೌರಿಗಣೇಶ ಮೂರ್ತಿಯನ್ನು ದಿವ್ಯ ದೀಪಾಲಕೃತ ಮಂಟಪದಲ್ಲಿ ಕುಳ್ಳಿರಿಸಿ ವಾದ್ಯಗೋಷ್ಠಿ ಹಾಗೂ ಡಿಜೆ, ಸಿಡಿ ಮದ್ದುಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಗೌರಿ ಗಣೇಶ ವಿಸರ್ಜನೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಭೈರವೇಶ್ವರ ಯುವಕರ ಸಂಘದ ವತಿಯಿಂದ ಕೂಡಿಗೆ ಗ್ರಾಮ ಪಂಚಾಯಿತಿ ಸದ್ಯಸ ಟಿ.ಪಿ.ಹಮಿದ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಬೈರವೇಶ್ವರ ಯುವಕ ಸಂಘದ ಅಧ್ಯಕ್ಷ ವೀರಭದ್ರ, ಸದಸ್ಯರುಗಳಾದ ನಿತೀನ್, ಸಂತೋಷ್, ಕುಮಾರ್, ನಿಶಾಂತ್, ಶಾಮು, ರಮೇಶ್, ವಿಶ್ವನಾಥ್, ಜೀವನ್, ಜಗ್ಗ, ಅರುಣ್, ಆನಂದ, ರಾಘು, ರಾಕೇಶ್, ಷಣ್ಮುಗ, ವೀರಣ್ಣ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net