

ಬೋರಗಾಂವ: ಸಮೀಪದ ಮಾಣಕಾಪುರಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಪ್ರವೀಣ ಕಾರಂಡೆ ನೆರೆ ಸಂತ್ರಸ್ತರೊಂದಿಗೆ ಚರ್ಚಿಸಿದರು. ಸ್ಥಳದಲ್ಲಿ ಗೈರು ಹಾಜರಿದ್ದ ನೋಡಲ್, ಕಂದಾಯ, ಆರೋಗ್ಯಾಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕೂಡಲೇ ಸ್ಥಳಕ್ಕೆ ಹಾಜರಾಗುವಂತೆ ಸೂಚನೆ ನೀಡಿದರು.
ಬಳಿಕ ಪಾಟೀಲ ತೋಟಕ್ಕೆ ತೆರಳಿ ಪ್ರವಾಹ ಪರಿಸ್ಥಿತಿಯ ಅವಲೋಕಿಸಿದರು. ಬೆಳೆ ಹಾನಿ ಕುರಿತು ಸಮೀಕ್ಷೆ ನಡೆಸಿ ಪರಿಹಾರ ಒದಗಿಸುವ ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನೀಲ ಮಾಕಾಳೆ ಮಾತನಾಡಿ, ಪಾಟೀಲ ತೋಟದಲ್ಲಿ ಪ್ರತಿ ವರ್ಷ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಪುನರ್ವಸತಿ ಕಲ್ಪಿಸಿದರೆ ಹೆಚ್ಚಿನ ಸಹಾಯವಾಗಲಿದೆ ಎಂದರು.
ಕಂದಾಯ ನಿರೀಕ್ಷಕ ರವಿಕುಮಾರ ಮಜ್ಲಿ, ಗ್ರಾಪಂ ಸದಸ್ಯರಾದ ಜಯಪಾಲ ಚೌಗುಲೆ, ಅವಿ ತೆರದಾಳೆ, ರಾಕೇಶ ಚೌಗುಲೆ, ಪ್ರಮೋದ ಶೇವಾಲೆ, ಅಮೋಲ ಬನ್ನೆ, ಬಾಬನ್ ಜಮಾದಾರ್, ಪ್ರಮೋದ ಮಾಳಿ, ಗಜಾನನ ಅರಗೆ, ದಾದಾಸೊ ಶೇವಾಳೆ, ಯುವರಾಜ ಮೋರೆ, ಅನಿಲ ಪಾಟೀಲ, ಸಚಿನ ಪಾಟೀಲ, ಸೂರಜ ಚೌಗುಲೆ, ಬಂಡು ಮಾಳಿ ಇತರರಿದ್ದರು.