ಮದ್ಯದಂಗಡಿ ಮುಚ್ಚಿಸುವಂತೆ ಮನವಿ

AML AHAVALU 07
Published on

ಐಮಂಗಲ: ಗ್ರಾಮದ ಮಧ್ಯಭಾಗದಲ್ಲಿ ತೆರೆಯಲು ನಿರ್ಧರಿಸಿರುವ ಮದ್ಯದ ಅಂಗಡಿಗೆ ಅವಕಾಶ ಕಲ್ಪಿಸಬಾರದು ಎಂದು ಸೊಂಡೆಕೆರೆ ಗ್ರಾಮಸ್ಥರು ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಅವರ ಬಳಿ ಒತ್ತಾಯಿಸಿದರು.

ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಳಲು ತೋಡಿಕೊಂಡ ಮಹಿಳೆಯರು, ಮದ್ಯದಂಗಡಿ ಮುಚ್ಚಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕುಟುಂಬ ಹಾಗೂ ಗ್ರಾಮದಲ್ಲಿ ಅನಗತ್ಯ ಕಿರಿಕಿರಿ ಹೆಚ್ಚುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಕುರಿತು ಜಿಲ್ಲಾಧಿಕಾರಿ ಹಾಗೂ ಅಬಕಾರಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಶಶಿಕಲಾ ಭರವಸೆ ನೀಡಿದರು.

ತಾಪಂ ಅಧ್ಯಕ್ಷೆ ಲಕ್ಷ್ಮೀದೇವಿ, ಮುಖಂಡರಾದ ಲಿಂಗರಾಜು, ಮಂಜುನಾಥ್, ನಾಗರತ್ನ ತಿಪ್ಪೇರುದ್ರಪ್ಪ, ಕಂದಿಕೆರೆ ಸುರೇಶ್‌ಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net