ಕಡಿಮೆ ಬೆಲೆಯ ಮದ್ಯ ಕದ್ದ ಕಳ್ಳರು!

AML KALAVU 2
Published on

ಐಮಂಗಲ: ಇಲ್ಲಿನ ಎಚ್.ಡಿ.ಪುರ ರಸ್ತೆಯಲ್ಲಿನ ಬಾರ್‌ವೊಂದರ ಚಾವಣಿ ಹೊಡೆದು ಮದ್ಯ ಕಳವು ಮಾಡಿರುವ ಪ್ರಕರಣ ಶುಕ್ರವಾರ ಬೆಳಕಿಗೆ ಬಂದಿದೆ.

ಬಾರ್‌ನ ಚಾವಣಿ 14 ಅಡಿ ಎತ್ತರವಿದ್ದು, ಸಿಮೆಂಟ್ ಸೀಟ್ ಹಾಕಲಾಗಿದೆ. ಕಳ್ಳರು ಪಕ್ಕದಲ್ಲಿದ್ದ ಕಾಂಪೌಂಡ್‌ನ ಮೂಲಕ ಮೇಲೆ ಹತ್ತಿ ಮದ್ಯ ಕಳವು ಮಾಡಿದ್ದಾರೆ.

ಸಿಸಿ ಕ್ಯಾಮರಾದಲ್ಲಿ ಗುರುತು ಸಿಗಬಹುದೆಂಬ ಕಾರಣದಿಂದ ಅದನ್ನು ಬೇರೆ ತಿರುಗಿಸಿ ವೈಯರ್‌ಗಳನ್ನು ಕಿತ್ತು ಹಾಕಿದ್ದಾರೆ. ಹೆಚ್ಚು ಬೆಲೆಯ ಮದ್ಯ ಬಿಟ್ಟು, ಕಡಿಮೆ ಬೆಲೆಯ ಮದ್ಯ ಕಳವು ಮಾಡಿದ್ದಾರೆ.

ಕಳ್ಳತನದ ಗುರುತು: ಕಳ್ಳರು ಚಾಲಾಕಿತನದಿಂದ ಕಳ್ಳತನ ಮಾಡಿದ್ದಾರೆ. ಶೀಟು ಹೊಡೆದು ಗೋಡೆಯ ಮೇಲೆ ಎಲ್ಲರಿಗೂ ಕಾಣುವಂತೆ ಇಟ್ಟು ಹೋಗಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರು ಕಳ್ಳತನವಾಗಿರಬಹುದೆಂದು ಸಂಶಯ ವ್ಯಕ್ತಪಡಿಸುತ್ತಿದ್ದರು.

ಕೊನೆಗೆ ಮಾಲೀಕರಿಗೆ ವಿಷಯ ತಿಳಿದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಬಂದು ಪರಿಶೀಲಿಸಿದರು.

ಅಬಕಾರಿ ನಿರೀಕ್ಷಕ ಮಧುಸೂದನ್, ಹಿರಿಯೂರು ವೃತ್ತ ನಿರೀಕ್ಷಕ ರಾಘವೇಂದ್ರ, ಪಿಎಸ್‌ಐ ಎ.ಮಂಜುನಾಥ್, ಪ್ರೊಬೇಷನರಿ ಪಿಎಸ್‌ಐ ಪರಶುರಾಮ್ ಎನ್.ಲಮಾಣಿ ಸ್ಥಳಕ್ಕೆ ಭೇಟಿ ನಿಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕಾರ್ಯ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net