

ಐಮಂಗಲ: ಗ್ರಾಪಂ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ರೈಲ್ವೆ ಯೋಜನೆಯ ಭೂ ಸ್ವಾಧೀನ ವಿಶೇಷ ಗ್ರಾಮ ಸಭೆಯಲ್ಲಿ ರೈತರು ಅಹವಾಲು ಸಲ್ಲಿಸಿದರು.
ಅಪರ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲೆಯ ದಶಕಗಳ ಬೇಡಿಕೆ ದಾವಣಗೆರೆ ತುಮಕೂರು ನೇರ ರೈಲು ಮಾರ್ಗದ ಭೂ ಸ್ವಾಧೀನ ಕಾರ್ಯ ಆರಂಭಿಸುವ ಮೊದಲು ವಿಶೇಷ ಗ್ರಾಮ ಸಭೆ ನಡೆಲಾಗುತ್ತಿದೆ. ರೈತರ ಸಮಸ್ಯೆ ಆಲಿಸಿ ಸೂಕ್ತ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.
ಯರದಕಟ್ಟೆ, ತವಂದಿ, ಗುಯಿಲಾಳು, ಬುರುಜಿನರೊಪ್ಪ, ಪಾಲವ್ವನಹಳ್ಳಿ ಹಾಗೂ ಐಮಂಗಲ ಗ್ರಾಮದ ರೈತರುಗಳು ಭಾಗವಹಿಸಿದ್ದರು.
ರೈಲ್ವೆ ಇಲಾಖೆಯ ಇಂಜಿನಿಯರ್ ಶಶಿಧರ್, ಗ್ರಾಪಂ ಉಪಾಧ್ಯಕ್ಷೆ ಕರಿಯಮ್ಮ, ಉಪತಹಸೀಲ್ದಾರ್ ಆರ್.ಮಂಜಪ್ಪ, ಪ್ರಭಾರ ಕಂದಾಯ ನಿರೀಕ್ಷಕ ಕರಿಯಪ್ಪ, ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.