ನಾಳೆ ಚಿಂತನ ಮಂಥನ

AML HARALAYYA 29
Published on

ಐಮಂಗಲ: ಹೊರವಲಯದ ಮಹಾ ಶಿವಶರಣ ಹರಳಯ್ಯ ಗುರುಪೀಠದಲ್ಲಿ ಮಾ.2ರ ಸಂಜೆ 6ಕ್ಕೆ ಜ್ಞಾನದ ಬೆಳಕು ಚಿಂತನ ಮಂಥನ ಕಾರ್ಯಕ್ರಮ ಆಯೋಜಿಸಲಾಗಿದೆ.

ಶ್ರೀ ಬಸವ ಹರಳಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಚಿತ್ರದುರ್ಗದ ಜಿ.ಕೆ.ಎಜುಕೇಶನ್ ಸೊಸೈಟಿಯ ಮಂಜುಳಾ ಗೋಪಾಲ್, ತುರುವನೂರು ಆಧ್ಯಾತ್ಮಿಕ ಚಿಂತಕ ನಿಂಗಪ್ಪ, ಹಾಸ್ಯ ಕಲಾವಿದರಾದ ಜಗನ್ನಾಥ್, ಜಾನಪದ ಕಲಾವಿದರಾದ ಗೋಂದಾಳಪ್ಪ, ಸಮಾಜ ಸೇವಕರಾದ ಗೀತಾ, ಸೋಮಣ್ಣ ಇತರರು ಭಾಗವಹಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net