ಮಕ್ಕಳೊಂದಿಗೆ ಕಾಲ ಕಳೆದ ಜಿಲ್ಲಾಧಿಕಾರಿ

AML BHETI
Published on

ಐಮಂಗಲ: ಹೋಬಳಿಯ ಸೊಂಡೆಕೆರೆ ಗ್ರಾಮದ 1ನೇ ಅಂಗನವಾಡಿ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಕೆಲ ಸಮಯ ಮಕ್ಕಳೊಂದಿಗೆ ಕಳೆದರು.

ಮಕ್ಕಳ ಯೋಗಕ್ಷೇಮ ವಿಚಾರಿಸಿದ ಡಿಸಿ, ಪ್ರತಿಯೊಬ್ಬರ ಹೆಸರು ಕೇಳಿದರು. ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಾರೆಯೇ, ಸಮಯಕ್ಕೆ ಸರಿಯಾಗಿ ಶುಚಿ-ರುಚಿಯಾದ ಊಟ ನೀಡುತ್ತಾರೆಯೇ, ಅಡುಗೆ ಹೇಗಿರುತ್ತದೆ, ಸಾರಿನಲ್ಲಿ ಬೇಳೆ, ತರಕಾರಿ ಇರುತ್ತದೆಯೇ?, ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಮಕ್ಕಳಿಂದ ಉತ್ತರ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net