ಶಾಲೆಗಳ ಪ್ರಗತಿಗೆ ಬೇಕು ಜನರ ಸಹಕಾರ

AML POSHAKARU 17
Published on

ಐಮಂಗಲ: ಶಿಕ್ಷಕರಿಗೆ ಪಾಲಕರು, ಸಮುದಾಯ ಸಹಕಾರ ನೀಡಿದರೆ ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಶಾಲೆಗಳ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪಿ.ಎನ್.ಕೃಷ್ಣ ಹೇಳಿದರು.

ಹೋಬಳಿಯ ಮರಡಿಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಪಾಲಕರ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಲೆಯಲ್ಲಿ ಶಿಕ್ಷಕರು ಪಾಠ ಹೇಳಿಕೊಟ್ಟರೆ ಪರಿವರ್ತನೆ ಅಸಾಧ್ಯ. ಮನೆಯಲ್ಲಿ ಪಾಲಕರು ಮಕ್ಕಳ ಅಭ್ಯಾಸದ ಬಗ್ಗೆ ಸದಾ ಕಾಳಜಿ ವಹಿಸಬೇಕು. ಚಿಕ್ಕಂದಿನಿಂದಲೇ ಕಲಿಕೆ, ಪುಸ್ತಕ ಓದಿನ ಅಭಿರುಚಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ಮುಖ್ಯಶಿಕ್ಷಕ ಎಂ.ಮನೋಹರ್ ಮಾತನಾಡಿ, ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರ, ಶಿಸ್ತು ದೊರೆತರೆ, ಶಾಲೆಯಲ್ಲಿ ಶಿಕ್ಷಕರು ಬೋಧಿಸುವ ಎಲ್ಲ ವಿಷಯವೂ ಮನನವಾಗುತ್ತದೆ. ಟಿವಿ, ಮೊಬೈಲ್‌ಗಳಿಂದ ಮಕ್ಕಳನ್ನು ದೂರವಿಟ್ಟು ಅಭ್ಯಸದೆಡೆಗೆ ಅವರ ಮನಸನ್ನು ಕೇಂದ್ರೀಕರಿಸುವ ಪ್ರಯತ್ನ ಪಾಲಕರು ಮಾಡಬೇಕು ಎಂದರು.

ಲೆಮನ್ ಸ್ಪೂನ್, ಮ್ಯೂಸಿಕಲ್ ಚೇರ್ ಇನ್ನಿತರ ಆಟೋಟಗಳಲ್ಲಿ ವಿಜೇತರಾದ ಪಾಲಕರಿಗೆ ಬಹುಮಾನ ವಿತರಿಸಲಾಯಿತು.
ಗ್ರಾಪಂ ಮಾಜಿ ಅಧ್ಯಕ್ಷ ನಾಗಪ್ಪರೆಡ್ಡಿ, ವಿ.ಟಿ.ಜಯಣ್ಣ, ಟಿ.ಎನ್.ರಾಧಮ್ಮ, ದೇವೇಂದ್ರಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net