ಹಂತ ಹಂತವಾಗಿ ಗ್ರಾಮಗಳ ಅಭಿವೃದ್ಧಿ

AML VITHARANE 06
Published on

ಐಮಂಗಲ: ಗ್ರಾಮಗಳಿಗೆ ಮೂಲ ಸೌಕರ್ಯಗಳನ್ನು ಹಂತ ಹಂತಗಳಲ್ಲಿ ಒದಗಿಸುವ ಮೂಲಕ ಗ್ರಾಮಗಳ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

ಹೋಬಳಿಯ ಮರಡಿ ದೇವಿಗೆರೆ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಐದು ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಈವರೆಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಿರುವ ಪ್ರದೇಶದ ರಸ್ತೆಗಳ ಅಭಿವೃದ್ಧಿ ಮಾಡಲಾಗಿತ್ತು. ಈಗ ಸಾಮಾನ್ಯ ವರ್ಗದವರಿಗೆ ಅನುದಾನ ನೀಡಲಾಗಿದೆ. ವಿವಿಧ ಗ್ರಾಮಗಳಿಗೆ 185 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಕೆಲವು ಹಳ್ಳಿಗಳಲ್ಲಿ ವಸತಿ ಯೋಜನೆಯಡಿ ನಿವೇಶನಗಳ ಕೊರತೆ ಇದ್ದು, ಸರ್ಕಾರಿ ಜಾಗವಿದ್ದಲ್ಲಿ ನಿವೇಶನವಾಗಿ ಪರಿರ್ವತಿಸಿ ವಿತರಿಸಲಾಗುವುದು ಎಂದರು.

ಜಿಪಂ ಸದಸ್ಯೆ ಟಿ.ಆರ್.ರಾಜೇಶ್ವರಿ, ಎಇಇ ಎಲ್.ಟಿ.ಶ್ರೀರಂಗಪ್ಪ, ಎ.ಇ.ನಾಗರಾಜಪ್ಪ, ಒ.ಜಿ.ಬಸವರಾಜ್, ಕಲ್ಲಹಟ್ಟಿ ಸಿ.ಪಾತಲಿಂಗಪ್ಪ, ರಂಗಸ್ವಾಮಿ, ಕೆ.ದ್ಯಾಮಣ್ಣ, ಪಾರ್ವತಮ್ಮ, ಮೈಲಾರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net