ಕರೊನಾ ವಿರುದ್ಧ ಯುದ್ಧ ಬಲಿಷ್ಠ ಆಗಲಿ

AML MASK
Published on

ಐಮಂಗಲ: ಆರೋಗ್ಯವೇ ಮಹಾಭಾಗ್ಯ ಎಂಬ ಅರಿವು ಜನರಲ್ಲಿ ಬಿತ್ತಬೇಕು ಎಂದು ಮಸ್ಕಲ್ ಕ್ಷೇತ್ರದ ಜಿಪಂ ಸದಸ್ಯೆ ಶಶಿಕಲಾ ಸುರೇಶ್‌ಬಾಬು ಹೇಳಿದರು.

ಹೋಬಳಿಯ ಗನ್ನಾಯಕನಹಳ್ಳಿ ಹಾಗೂ ರಂಗೇನಹಳ್ಳಿ ಗ್ರಾಪಂ ವ್ಯಾಪ್ತಿ ಹಳ್ಳಿಗಳಲ್ಲಿ ಕರೊನಾ ತಡೆಗೆ ಮುಂಜಾಗ್ರತೆ ಕ್ರಮಗಳ ಕುರಿತು ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿದರು.

ಕರೊನಾ ವಿರುದ್ಧ ಯುದ್ಧದಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಪೌರಕಾರ್ಮಿಕರು ಸೇರಿ ಅನೇಕ ಕ್ಷೇತ್ರದ ಜನರ ಹೋರಾಟ ನಡೆಸುತ್ತಿದ್ದಾರೆ. ಇವರ ಆಶಯಕ್ಕೆ ಚ್ಯುತಿ ಬಾರದಂತೆ ಜನತೆ ಸ್ವಚ್ಛತೆ ಹಾಗೂ ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಬೇಕು. ಈ ಮೂಲಕ ಹೋರಾಟ ತೀವ್ರಗೊಳಿಸಬೇಕು ಎಂದು ತಿಳಿಸಿದರು.

ಅಂಗನವಾಡಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿದರು.

ಗ್ರಾಪಂ ಅಧ್ಯಕ್ಷರಾದ ಶ್ರೀಧರ್, ಯಶೋದಾ ಚಿಕ್ಕಣ್ಣ, ಉಪಾಧ್ಯಕ್ಷ ಕಿರಣ್, ಸವಿತಾ, ತಾಪಂ ಸದಸ್ಯ ಶಂಕರಮೂರ್ತಿ, ಪಿಡಿಒಗಳಾದ ಸವಿತಾಬಾಯಿ, ಲಕ್ಷ್ಮೀಕಾಂತ್, ಸದಸ್ಯರಾದ ಮಾರುತಿ, ವಿನಯ್, ಶಿವಗಂಗಾ, ನಿಂಗರಾಜು, ಶಿವಲಿಂಗಪ್ಪ, ರಾಘವೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net