ಧರ್ಮಸ್ಥಳ ಸಂಸ್ಥೆಯಿಂದ ಒಳ್ಳೆ ಕೆಲಸ

AML HOOLU 1
Published on

ಐಮಂಗಲ: ಕೆರೆ ಹೂಳೆತ್ತುವುದರಿಂದ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿಯುವ ನೀರು ಶೇಖರಣೆಗೊಂಡು ಅಂತರ್ಜಲ ಹೆಚ್ಚಳವಾಗಲು ಅನುಕೂಲವಾಗುತ್ತದೆ ಎಂದು ಮಸ್ಕಲ್ ಕ್ಷೇತ್ರದ ಜಿಪಂ ಸದಸ್ಯೆ ಶಶಿಕಲಾ ಹೇಳಿದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಗ್ರಾಪಂ ಹಾಗೂ ಕೆರೆ ಅಭಿವೃದ್ಧಿ ಸಮಿತಿಯಿಂದ ನಮ್ಮ ಊರು ನಮ್ಮ ಕೆರೆ ಯೋಜನೆಯಡಿ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಧರ್ಮಸ್ಥಳ ಸಂಸ್ಥೆ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಅನೇಕ ಜನಪರ ಕಾರ್ಯಕ್ರಮ ಹಮ್ಮಿಕೊಂಡು ಉತ್ತಮ ಕೆಲಸ ಮಾಡುತ್ತಿದೆ. ಈ ಗ್ರಾಮ ಕೆರೆ ಅಭಿವೃದ್ಧಿಗಾಗಿ 10 ಲಕ್ಷ ರೂ. ನೀಡಲಾಗಿದೆ ಎಂದರು.

ವೈದ್ಯಾಧಿಕಾರಿ ಡಾ.ರಂಗಸ್ವಾಮಿನಾಯಕ ಮಾತನಾಡಿ, ಮಹಾಮಾರಿ ಕರೊನಾ ನಿಯಂತ್ರಣಕ್ಕೆ ಸರ್ವರ ಸಹಕಾರ ಅಗತ್ಯ ಎಂದು ಹೇಳಿದರು.

ಯೋಜನಾಧಿಕಾರಿ ಪಾತಲಿಂಗಪ್ಪ ಮಾತನಾಡಿದರು. ಜನಜಾಗೃತಿ ವೇದಿಕೆ ಸದಸ್ಯ ಪ್ರತಾಪ್ ಸಿಂಹ, ಗ್ರಾಪಂ ಸದಸ್ಯೆ ತ್ರಿಪುರ್ಣಮ್ಮ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಆರ್.ರುದ್ರಯ್ಯ, ಕೃಷಿ ಅಧಿಕಾರಿ ಮಹಾಂತೇಶ್, ಮೇಲ್ವಿಚಾರಕ ಏಕಾಂತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net