ಸಾಮಾಜಿಕ ಅಂತರ ಅವಶ್ಯ

AML JAGRUTHI 11
Published on

ಐಮಂಗಲ: ಮಹಾಮಾರಿ ಕರೊನ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಜಿಪಂ ಸದಸ್ಯೆ ಶಶಿಕಲಾ ಸುರೇಶ್‌ಬಾಬು ಹೇಳಿದರು.

ಬೇರೆ ಜಿಲ್ಲೆಗಳಿಂದ ಬಂದು ಹೋಂ ಕ್ವಾರಂಟೈನ್‌ನಲ್ಲಿ ಇದ್ದವರನ್ನು ಹೋಬಳಿಯ ಯರಬಳ್ಳಿ ಹಾಗೂ ಎಂ.ಡಿ.ಕೋಟೆ ಗ್ರಾಪಂ ವ್ಯಾಪ್ತಿಯಲ್ಲಿ ಶನಿವಾರ ಭೇಟಿ ಮಾಡಿ ಮಾತನಾಡಿದರು.

ಜೀವನ ನಿರ್ವಹಣೆಗಾಗಿ ಕೆಲಸ ಅರಸಿ ಬೇರೆ ಬೇರೆ ಜಿಲ್ಲೆಗಳಿಗೆ ಹೋಗಿ ಬಂದವರನ್ನು ನೆರೆಹೊರೆಯವರು ತೊಂದರೆ ನೀಡದೇ ಸ್ನೇಹಿತರಂತೆ ಕಾಣಬೇಕು. ಅವರ ಬಗ್ಗೆ ತಾತ್ಸಾರ ಮನೋಭಾವ ಬೇಡ ಎಂದರು.

ಯರಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜ್ಯೋತಿ ಮಾತನಾಡಿದರು. ತಾಪಂ ಅಧ್ಯಕ್ಷೆ ಲಕ್ಷ್ಮೀದೇವಿ, ಯರಬಳ್ಳಿ ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ, ಉಪಾಧ್ಯಕ್ಷ ನಿಂಗಪ್ಪ, ಪಿಡಿಒ ಬಸವರಾಜ್, ಎಂ.ಡಿ.ಕೋಟೆ ಗ್ರಾಪಂ ಸದಸ್ಯರಾದ ಶಾಂತಮ್ಮ, ಭಾಗ್ಯಮ್ಮ, ಜಯಮ್ಮ, ಮುಖಂಡ ಕಂದಿಕೆರೆ ಸುರೇಶ್‌ಬಾಬು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net