ಅಮೂಲ್ಯ ಜೀವನದ ಬಗ್ಗೆ ಇರಲಿ ಕಾಳಜಿ

AML GNANADA BELAKU 04
Published on

ಐಮಂಗಲ: ಒತ್ತಡ ಬದಿಗೊತ್ತಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪ್ರತಿಯೊಬ್ಬರು ಪ್ರಯತ್ನಿಸಬೇಕು ಎಂದು ಬಸವ ಹರಳಯ್ಯ ಗುರುಪೀಠದ ಪೀಠಾಧ್ಯಕ್ಷ ಶ್ರೀ ಬಸವ ಹರಳಯ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಹರಳಯ್ಯ ಗುರುಪೀಠದ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜ್ಞಾನದ ಬೆಳಕು ಕಾರ್ಯಕ್ರಮದಲ್ಲಿ ಮಾತನಾಡಿ, ಮಾನವನ ಬದುಕು ಅಮೂಲ್ಯವಾದದು ಎಂದರು.

ಸಮಾಜ ನಮಗೇನು ನೀಡಿದೆ ಎಂಬುದನ್ನು ಬಿಟ್ಟು ನಾನು ಸಮಾಜಕ್ಕೆ ಏನು ಕೊಡುಗೆ ನೀಡಿರುವೆ ಎಂಬುದರ ಬಗ್ಗೆ ಚಿಂತಿಸಬೇಕು.ನಿತ್ಯದ ಜಂಜಾಟಗಳಿಂದ ಹೊರಬಂದು ಸಮಾಜದ ಅಭಿವೃದ್ಧಿಗೆ ಕೆಲ ಸಮಯ ಮೀಸಲಿಡಬೇಕು ಎಂದು ಸಲಹೆ ನೀಡಿದರು.

ಸಮಾಜ ಸೇವಕ ಸೋಮಶೇಖರ್ ಮಾತನಾಡಿ, ಮಾನವೀಯ ಸಂಬಂಧಗಳಿಗೆ ಹೆಚ್ಚಿನ ಮಹತ್ವ ನೀಡಬೇಕು. ಪರಸ್ಪರ ಸ್ನೇಹ ಪ್ರೀತಿ ವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಆಧ್ಯಾತ್ಮಿಕ ಚಿಂತಕ ಲಿಂಗಪ್ಪ, ಸಮಾಜ ಸೇವಕಿ ಮಂಜುಳಾ, ಜನಪದ ಕಲಾವಿದ ಗೋಂದಾಳಪ್ಪ, ಹಾಸ್ಯ ಸಾಹಿತಿ ಜಗನ್ನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net