ಮೌಢ್ಯತೆ ಕೈಬಿಟ್ಟು ಬದುಕು ಕಟ್ಟಿಕೊಳ್ಳಿ

AML PADAPOOJE 15
Published on

ಐಮಂಗಲ: ಯಾವುದೇ ಭೇದ ಭಾವ ಇಲ್ಲದೆ ಎಲ್ಲ ಸಮುದಾಯದವರೂ ಒಗ್ಗಟ್ಟಿನಿಂದ ಬಾಳಬೇಕು ಎಂದು ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.

ಹೋಬಳಿಯ ಕೋವೆರಹಟ್ಟಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಪಾದಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಳೆಯ ಮೂಢನಂಬಿಕೆಗಳಿಗೆ ಬಲಿಯಾಗದೇ ಎಲ್ಲರನ್ನೂ ಸಮಾನರೆಂದು ಕಾಣಿ ಎಂದರು.

ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಅಮೂಲ್ಯವಾದ ನೀರನ್ನು ರಕ್ಷಣೆ ಮಾಡಬೇಕಿದೆ,. ಮದ್ಯಪಾನಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬೇಡಿ ಎಂದರು.

ಭಕ್ತರ ಮನೆಗಳಿಗೆ ಭೇಟಿ ನೀಡಿ, ದವಸ ಧಾನ್ಯ ಸಂಗ್ರಹಿಸಿದರು. ಸ್ವಾತಂತ್ರೃ ಹೋರಾಟಗಾರ ಗೋವಿಂದಪ್ಪ ಅವರನ್ನು ಸನ್ಮಾನಿಸಲಾಯಿತು. ಮೀಸೆ ಮಹಾಲಿಂಗಪ್ಪ, ಹುಚ್ಚವ್ವನಹಳ್ಳಿ ಪ್ರಸನ್ನ, ಎನ್.ಉಮಾಪತಿ, ರಾಘವೇಂದ್ರ, ಮಲ್ಲಯ್ಯ, ಶಶಿಧರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net