ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ

AML KARFYU 3
Published on

ಐಮಂಗಲ: ಜನತಾ ಕರ್ಫ್ಯೂಗೆ ಐಮಂಗಲ ಹಾಗೂ ಹೋಬಳಿಯಾದ್ಯಂತ ಬೆಂಬಲ ವ್ಯಕ್ತವಾಯಿತು. ವ್ಯಾಪಾರ -ವಹಿವಾಟು ಸ್ಥಗಿತಗೊಳಿಸಿ ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿತ್ತು.

ಜನ, ವಾಹನ ಸಂಚಾರ ಸ್ಥಗಿತಗೊಂಡಿತ್ತು. ಎಚ್.ಡಿ.ಪುರ ಹಾಗೂ ವದ್ದಿಕೆರೆ ರಸ್ತೆ ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ರಾಷ್ಟ್ರೀಯ ಹೆದ್ದಾರಿ ಪೈಪೋಟಿಯಲ್ಲಿ ಸಂಚರಿಸುತ್ತಿದ್ದ ವಾಹನಗಳಿಲ್ಲದೆ ಭಣಗುಡುತ್ತಿತ್ತು.

ಬೆಳಗ್ಗೆ 7ಕ್ಕೆ ಹಾಲು, ಅಗತ್ಯ ತರಕಾರಿ ಖರೀದಿಸಿ ಮನೆ ಸೇರಿದ ಜನ ಹೊರಗಡೆ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಮಕ್ಕಳು, ಮೊಮ್ಮಕ್ಕಳೊಂದಿಗೆ ಅನಂದದಿಂದ ದಿನ ಕಳೆದರು.

ಹೋಬಳಿಯ ವದ್ದಿಕೆರೆ ಕಾಲ ಭೈರವೇಶ್ವರ ಸ್ವಾಮಿಗೆ ಬೆಳಗ್ಗೆ ಮಹಾ ಮಂಗಳಾರತಿ ನೆರವೇರಿಸಿ ದೇವಸ್ಥಾನಕ್ಕೆ ಬೀಗ ಹಾಕಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net