ಬೆಂಕಿಗೆ ಗುಡಿಸಲು, ಮನೆ ಭಸ್ಮ

AML BENKI
Published on

ಐಮಂಗಲ: ಹೋಬಳಿಯ ಯಲಕೂರನಹಳ್ಳಿಯಲ್ಲಿ ಭಾನುವಾರ ಸಂಭವಿಸಿದ ಆಕಸ್ಮಿಕ ಬೆಂಕಿಗೆ ಗುಡಿಸಲು ಮತ್ತು ಸೀಟಿನ ಮನೆ ಸುಟ್ಟು ಕರಕಲಾಗಿದೆ.

ಗ್ರಾಮದ ತಿಪ್ಪೇಸ್ವಾಮಿ ಎಂಬುವವರಿಗೆ ಸೇರಿದ ಗುಡಿಸಲಿಗೆ ತಗುಲಿದ ಬೆಂಕಿ ಪಕ್ಕದಲ್ಲಿದ್ದ ಸುರೇಶ್ ಅವರ ಸೀಟಿನ ಮನೆಗೂ ಆವರಿಸಿದ್ದರಿಂದ ಎರಡೂ ಸಂಪೂರ್ಣ ಸುಟ್ಟು ಹೋಗಿವೆ. ಬೆಂಕಿಯ ಕೆನ್ನಾಲಿಗೆಗೆ ನಿತ್ಯ ಬಳಕೆ ವಸ್ತುಗಳು, ದಿನಸಿ, ದವಸ ಧಾನ್ಯ, ಬಟ್ಟೆ, ಗೃಹೋಪಯೋಗಿ ವಸ್ತುಗಳು ಆಹುತಿಯಾಗಿವೆ.

ಸ್ಥಳಕ್ಕೆ ಹಿರಿಯೂರಿನ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ತಹಸೀಲ್ದಾರ್ ಜಿ.ಬಿ.ಸತ್ಯನಾರಾಯಣ, ಉಪ ತಹಸೀಲ್ದಾರ್ ಆರ್.ಮಂಜಪ್ಪ, ಜಿಪಂ ಸದಸ್ಯೆ ಟಿ.ಆರ್.ರಾಜೇಶ್ವರಿ, ಸ್ಥಳೀಯ ಪೊಲೀಸ್ ಠಾಣೆ ಪಿಎಸ್‌ಐ ಎ.ಮಂಜುನಾಥ್ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net