ಮುನ್ನೆಚ್ಚರಿಕೆಯೇ ಮದ್ದು

AML JATHA 20
Published on

ಐಮಂಗಲ: ಕರೊನಾ ವೈರಸ್ ತಡೆಗೆ ಮುನ್ನೆಚ್ಚರಿಕೆ ಕ್ರಮವೇ ಮದ್ದೆಂದು ಪಿಡಿಒ ಸಿ.ಚಿಕ್ಕಣ್ಣ ಹೇಳಿದರು.

ಗ್ರಾಪಂ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕರೊನಾ ಜನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುಖಕ್ಕೆ ಮಾಸ್ಕ್, ಕೈಗಳಿಗೆ ಗ್ಲೌಸ್ ಧರಿಸಬೇಕು. ಒಬ್ಬರಿಂದ ಒಬ್ಬರಿಗೆ ಅಂತರ ಕಾಯ್ದುಕೊಳ್ಳಬೇಕು. ಪದೇ ಪದೆ ಮುಖ, ಮೂಗು, ಕಣ್ಣು ಮುಟ್ಟಿಕೊಳ್ಳಬಾರದು. ನೆಗಡಿ, ಕೆಮ್ಮು, ತೀವ್ರ ಜ್ವರ, ಉಸಿರಾಟ ತೊಂದರೆ ಇದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು ಎಂದು ಸಲಹೆ ನೀಡಿದರು.

ಗ್ರಾಪಂ ಅಧ್ಯಕ್ಷ ಎಚ್.ಸುರೇಂದ್ರಕುಮಾರ್, ಸದಸ್ಯರಾದ ಡಿ.ಮೂರ್ತಿ, ಚಂದ್ರನಾಯಕ, ಎಲ್.ತಿಪ್ಪೇಸ್ವಾಮಿ, ಸಿಬ್ಬಂದಿ ಸುಧಾ, ಸ್ಮಿತಾ, ಜಗದೀಶ್, ಅಂಗನವಾಡಿ ಕಾರ್ಯಕರ್ತೆಯರಾದ ಕೆ.ಸುಧಾಮಣಿ, ಶ್ರೀದೇವಿ, ಈ.ಎಚ್.ಅರುಣಾಕುಮಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net