ಹೆಲ್ಮೆಟ್ ಉಳಿಸಲಿದೆ ಜೀವನ

AML HELMET 04
Published on

ಐಮಂಗಲ: ಪ್ರತಿಯೊಬ್ಬರು ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸಿದಲ್ಲಿ ದೊಡ್ಡ ದುರಂತಗಳನ್ನು ತಪ್ಪಿಸಬಹುದು ಎಂದು ಎಎಸ್‌ಐ ಟಿ.ಎಚ್.ಶ್ರೀಶೈಲಪ್ಪ ಹೇಳಿದರು.

ಗ್ರಾಮದಲ್ಲಿ ಮಂಗಳವಾರ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಬೈಕ್ ರ‌್ಯಾಲಿ ವೇಳೆ ಮಾತನಾಡಿ, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿದರೆ ಜೀವ ಉಳಿಯಲಿದೆ ಎಂದರು.

ವಾಹನಗಳ ಅಧಿಕೃತ ದಾಖಲಾತಿ ಪ್ರತಿಗಳನ್ನು ಯಾವಾಗಲೂ ವಾಹನಗಳಲ್ಲಿ ಇಡಬೇಕು. 18 ವರ್ಷದೊಳಗಿನ ಮಕ್ಕಳು ವಾಹನ ಚಾಲನೆ ಮಾಡಬಾರದು, ಮದ್ಯಪಾನ, ಮೊಬೈಲ್ ಬಳಸುತ್ತ ವಾಹನ ಚಲಾಯಿಸಬಾರದು ಎಂದು ತಿಳಿಸಿದರು.

ಪ್ರೊಬೇಷನರಿ ಪಿಎಸ್‌ಐ ಪರಶುರಾಮ್, ಸಿಬ್ಬಂದಿ ವೀರೇಶ್, ಸಯ್ಯದ್ ಖಾಸಿಂ, ರಮೇಶ್, ಮುದ್ದಹನುಮೇಗೌಡ, ರವಿನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net