ದೇಸಿ ಪದ್ಧತಿಯಿಂದ ಆರೋಗ್ಯ

AML AYURVEDHA
Published on

ಐಮಂಗಲ: ದೇಸಿ ಪದ್ಧತಿ ಆಯುರ್ವೇದ ಚಿಕಿತ್ಸೆಯಿಂದ ಹಲವು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ ಎಂದು ಯರಬಳ್ಳಿ ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಹೇಳಿದರು.

ಆಯುಷ್ ಇಲಾಖೆ, ಜಿಪಂ, ರಾಷ್ಟ್ರೀಯ ಆಯುಷ್ ಮಿಷನ್‌ನಿಂದ ಕಂದಿಕೆರೆ ಗ್ರಾಮದ ಸರ್ಕಾರಿ ಪಾಠ ಶಾಲಾವರಣದಲ್ಲಿ ಸೋಮವಾರ ಆಯೋಜಿಸಿದ್ದ ಆಯುಷ್ ಆರೋಗ್ಯ ಉಚಿತ ಶಿಬಿರ ಉದ್ಘಾಟಿಸಿ ಮತನಾಡಿದರು.

ಯುವ ಜನರು ಫಾಸ್ಟ್‌ಫುಡ್‌ಗಳಿಗೆ ಮಾರು ಹೋಗಿ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ನಮ್ಮ ಹಿರಿಯರು ಸೊಪ್ಪು, ತರಕಾರಿ ಸೇವನೆ ಮೂಲಕ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು. ಪಂಚಕರ್ಮದಿಂದ ಪಾರ್ಶವಾಯು ಪೀಡಿತರನ್ನು ಗುಣಪಡಿಸಬಹುದು. ಹಿಂದೆ ಗ್ರಾಮಗಳಲ್ಲಿ ನಾಟಿ ವೈದ್ಯರು ನೀಡುತ್ತಿದ್ದ ಔಷಧ ಸೇವಿಸಿ ರೋಗರುಜನೆಗಳಿಂದ ದೂರ ಉಳಿಯುತ್ತಿದ್ದರು ಎಂದರು.

ಜಿಪಂ ಸದಸ್ಯೆ ಶಶಿಕಲಾ ಸುರೇಶ್‌ಬಾಬು, ತಾಪಂ ಸದಸ್ಯೆ ಪುಷ್ಪಾ, ವೈದ್ಯರಾದ ನಾರದಮುನಿ, ಶಂಕರ್.ಬಿ.ಕೊಟ್ರೆ, ದೇವರಾಜು, ಮುಖ್ಯಶಿಕ್ಷಕಿ ಲಲಿತಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net