

ಲಿಂಗಸುಗೂರು: ತಾಲೂಕಿನ ಕೆಸರಟ್ಟಿ ಗ್ರಾಮದ ಸರ್ವೇ ನಂ.35/1 ರ ಸರ್ಕಾರಿ ಗೈರಾಣಿ ಜಮೀನಿನಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಕಾಯ್ದಿರಿಸಿದ ಒಂದು ಎಕರೆ ಜಮೀನಿನ ಬದಲಾಗಿ ಈ ಹಿಂದೆ ನೀಡಿದ್ದ ಸರ್ವೇ ನಂ.1 ರಲ್ಲಿ ಸ್ಮಶಾನ ಜಾಗೆ ನೀಡಬೇಕೆಂದು ಒತ್ತಾಯಿಸಿ ಕೆಸರಟ್ಟಿ ಗ್ರಾಮಸ್ಥರು ಎಸಿ ಕಚೇರಿ ಎಫ್‌ಡಿಸಿ ಅನುಪಮಾ ಸಿಂಗ್‌ಗೆ ಗುರುವಾರ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಈ ಹಿಂದೆ ಅಮರೇಗೌಡ ಈಚನಾಳ ಅವರ ಸರ್ವೇ ನಂ.1* ಹಿಸ್ಸಾ* 14.25 ಎಕರೆ ಜಮೀನಿನ ಪೈಕಿ 2 ಎಕರೆ ಜಮೀನನ್ನು ಸರ್ಕಾರ 14 ಲಕ್ಷ ರೂ.ಗೆ ಖರೀದಿಸಿ ಸಾರ್ವಜನಿಕ ಸ್ಮಶಾನಕ್ಕೆ ನೀಡಲಾಗಿತ್ತು. ಆದರೆ ಸದರಿ ಜಮೀನಿನ ಮಾಲೀಕ ಅಮರೇಗೌಡ ಈಚನಾಳಗೆ ಸರ್ಕಾರದಿಂದ 14 ಲಕ್ಷ ರೂ. ನೀಡಿಲ್ಲ. ಇದರಿಂದ ಜಮೀನಿನ ಮಾಲೀಕರು ಶವಸಂಸ್ಕಾರಕ್ಕೆ ಅನುಮತಿ ನೀಡುತ್ತಿಲ್ಲ ಎಂದರು.