ಮನಸ್ಸಿನ ಭಾವನೆಗಳೇ ಚಿತ್ರಗಳು

h11-vimala kulakarni
Published on

ಹುಬ್ಬಳ್ಳಿ: ಇಲ್ಲಿಯ ಭವಾನಿನಗರದ ಭಾವದೀಪ ಶಿಕ್ಷಣ ಸಂಸ್ಥೆಯ ಶ್ರೀಮತಿ ವಿಮಲಾ ಕುಲಕರ್ಣಿ ಮೆಮೋರಿಯಲ್ ಶಾಲೆಯಲ್ಲಿ ಶನಿವಾರ 6ನೇ ವರ್ಷದ ಜಿಲ್ಲಾ ಮಟ್ಟದ ರಾಜಾರವಿವರ್ಮ ಅಂತರ ಶಾಲಾ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು.

ಅತಿಥಿಗಳಾಗಿ ಆಗಮಿಸಿದ್ದ ಜ್ಯೋತಿ ಪ್ರಲ್ಹಾದ ಜೋಶಿ ಉದ್ಘಾಟಿಸಿಸಿ ಮಾತನಾಡಿ, ಮನಸ್ಸಿನ ಭಾವನೆಗಳನ್ನು ಚಿತ್ರದ ಮೂಲಕ ತೋರ್ಪಡಿಸಲು ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಸಹಕಾರಿ ಎಂದು ಹುರಿದುಂಬಿಸಿದರು.

ಚಿತ್ರಕಲಾ ಶಿಕ್ಷಕ ಎಂ.ವೈ. ಬಡಿಗೇರ ಅವರು ಚಿತ್ರಕಲೆಯ ನೀತಿ-ನಿಯಮಗಳ ಬಗ್ಗೆ ವಿವರಿಸಿದರು.

ತೀರ್ಪುಗಾರರಾದ ಎಸ್.ವಿ. ಗುಂಜಾಳ ಮತ್ತು ಡಾ. ಶಂಕರಪ್ಪ ಕುಂದಗೋಳ ನೀಡಿದ ತೀರ್ಪಿನನ್ವಯ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಸನ್ಮಾನಿಸಲಾಯಿತು.

ಈ ಬಾರಿ ಶಿಕ್ಷಕರಿಗೂ ಚಿತ್ರಕಲೆ ಸ್ಪರ್ಧೆ ಏರ್ಪಡಿಸಿ ಅವರಿಗೂ ಅತ್ಯತ್ತಮ ಚಿತ್ರಕಲಾ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಮಾಣಪತ್ರ ವಿತರಿಸಲಾಯಿತು.

ಶಾಲೆಯ ಖಜಾಂಚಿ ಕನಕಗಿರಿ ರಘೋತ್ತಮರಾವ್, ಸದಸ್ಯ ಶ್ರೀರಂಗ ಹನುಮಸಾಗರ, ಪ್ರಾಂಶುಪಾಲ ಎಂ.ಕೆ. ಹಿರೇಮಠ, ಮುಖ್ಯೋಪಾಧ್ಯಾಯಿನಿ ಅನಿತಾ ಬಾಗಲಕೋಟ ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಗ್ರೀಷ್ಮಾ, ಶ್ರೀವತ್ಸ , ಯುಗ್, ಸಾನ್ವಿ ನಿರೂಪಿಸಿದರು. ವಿಭಾ, ತನುಶ್ರೀ ಸ್ವಾಗತಿಸಿದರೆ, ಶರಧಿ, ಸೃಷ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net