ಐಎಂಎ ಶಿವಮೊಗ್ಗ ದೇಶದ ಅತ್ಯುತ್ತಮ ಶಾಖೆ

shimogga ima award
ರಾಷ್ಟ್ರಮಟ್ಟದ ಭಾರತೀಯ ವೈದ್ಯಕೀಯ ಮಹಾಸಮ್ಮೇಳನದಲ್ಲಿ ಐಎಂಎ ಅಧ್ಯಕ್ಷ ಡಾ. ಅಶೋಕನ್ ಅವರಿಂದ ಅತ್ಯುತ್ತಮ ದೊಡ್ಡ ಶಾಖೆ ಪ್ರಶಸ್ತಿಯನ್ನು ಶಿವಮೊಗ್ಗ ಶಾಖೆಯ ಮಾಜಿ ಅಧ್ಯಕ್ಷ ಡಾ. ಎಂ.ಎಸ್.ಅರುಣ್ ಮತ್ತು ಕಾರ್ಯದರ್ಶಿ ಡಾ. ರಕ್ಷಾ ರಾವ್ ಸ್ವೀಕರಿಸಿದರು. ಡಾ. ಶಿವಕುಮಾರ್ ಲಕ್ಕೋಲ್ ಇದ್ದರು.
Published on

ಶಿವಮೊಗ್ಗ: ಕೇರಳದ ತಿರುವನಂತಪುರಂನ ಕೋವಲಂನಲ್ಲಿ ಎರಡು ದಿನ ನಡೆದ ರಾಷ್ಟ್ರಮಟ್ಟದ ಭಾರತೀಯ ವೈದ್ಯಕೀಯ ಮಹಾಸಮ್ಮೇಳನದಲ್ಲಿ ಐಎಂಎ(ಭಾರತೀಯ ವೈದ್ಯಕೀಯ ಸಂಘ) ಶಿವಮೊಗ್ಗ ಶಾಖೆಗೆ ಅತ್ಯುತ್ತಮ ದೊಡ್ಡ ಶಾಖೆ ಪ್ರಶಸ್ತಿ ದೊರೆತಿದೆ.

ಐಎಂಎ ಅಧ್ಯಕ್ಷ ಡಾ. ಅಶೋಕನ್ ಅವರಿಂದ ಶಿವಮೊಗ್ಗ ಶಾಖೆ ಮಾಜಿ ಅಧ್ಯಕ್ಷ ಡಾ. ಎಂ.ಎಸ್.ಅರುಣ್ ಮತ್ತು ಮಾಜಿ ಕಾರ್ಯದರ್ಶಿ ಡಾ. ರಕ್ಷಾ ರಾವ್ ಗುರುವಾರ ಪ್ರಶಸ್ತಿ ಸ್ವೀಕರಿಸಿದರು. ರಾಜ್ಯಾಧ್ಯಕ್ಷ ಡಾ. ಶಿವಕುಮಾರ್ ಲಕ್ಕೋಲ್ ಅವರು ಉಪಸ್ಥಿತರಿದ್ದರು.
2022ರ ಸೆಪ್ಟಂಬರ್‌ನಿಂದ ಅಕ್ಟೋಬರ್ 1ರವರೆಗೆ ಶಿವಮೊಗ್ಗ ಐಎಂಎ ಶಾಖೆಯ ಅಧ್ಯಕ್ಷರಾಗಿ ಡಾ. ಎಂ.ಎಸ್.ಅರುಣ್ ಮತ್ತು ಕಾರ್ಯದರ್ಶಿಯಾಗಿ ಡಾ . ರಕ್ಷಾ ರಾವ್ ಕಾರ್ಯನಿರ್ವಹಿಸಿದ್ದರು. ಅವರ ನೇತೃತ್ವದಲ್ಲಿ ವೈದ್ಯರಿಗೆ ವೈಜ್ಞಾನಿಕ ಕಲಿಕಾ ಕಾರ್ಯಾಗಾರಗಳು, ವಿಶ್ವ ಅರೋಗ್ಯ ದಿನಗಳ ಆಚರಣೆ, ಶಾಲಾ ಕಾಲೇಜುಗಳಲ್ಲಿ ಆರೋಗ್ಯ ಜಾಗೃತಿ, ಮಹಿಳಾ ಆರೋಗ್ಯ, ಸಾರ್ವಜನಿಕರು ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಜೀವರಕ್ಷಕ ಸಿಪಿಆರ್ ಕಾರ್ಯಾಗಾರ, ಅಧಿಕಸ್ಯ ಅಧಿಕ ಫಲಂ ಒಂದು ತಿಂಗಳ ಉಚಿತ ಆರೋಗ್ಯ ಮಾಹಿತಿ ಶಿಬಿರ, ಕೆ-ಲೈವ್ ಜತೆಗೆ ನಮಸ್ತೆ ಐಎಂಎ ಯೂಟ್ಯೂಬ್ ಆರೋಗ್ಯ ಮಾಲಿಕೆ ಸರಣಿಗಳು, ವೈದ್ಯರಿಗೆ ಮತ್ತು ಕುಟುಂಬದವರಿಗೆ ಸಾಂಸ್ಕೃತಿಕ ಸಂಜೆ, ಚಾರಣ, ಹಿರಿಯ ವೈದ್ಯ ಸದಸ್ಯರಿಗೆ ಮನೆಯಲ್ಲಿ ಭೇಟಿ, ಕುಶಲೋಪಚಾರ ವಿನಿಮಯ ಸೇರಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪರಿಗಣಿಸಿ ಅತ್ಯುತ್ತಮ ಪ್ರಶಸ್ತಿ ದೊರೆತಿದೆ.
ಸಾರ್ವಜನಿಕ ವಲಯದಲ್ಲಿ ಐಎಂಎ ಶಿವಮೊಗ್ಗ ಮನೆಮಾತಾಗಿದ್ದು ಇದೀಗ ರಾಷ್ಟ್ರಮಟ್ಟದಲ್ಲೂ ಅತ್ಯುತ್ತಮ ಶಾಖೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ ಎಂದು ಹಾಲಿ ಅಧ್ಯಕ್ಷ ಡಾ. ರಮೇಶ್ ಹಾಗೂ ಕಾರ್ಯದರ್ಶಿ ಡಾ. ಅರವಿಂದನ್ ತಿಳಿಸಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net