ಐಎಂಎ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ

IMA
ಐಎಂಎ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ ಜರುಗಿತು. ಕ್ಯಾನ್ಸರ್ ತಜ್ಞ ಡಾ.ರಚನ್ ಶೆಟ್ಟಿ, ಕ್ಯಾನ್ಸರ್ ತಜ್ಞ ಡಾ.ಸಾನ್ಯೋ ಪಿ.ಡಿ.ಸೋಜ, ಐಎಂಎ ಅಧ್ಯಕ್ಷ ಡಾ.ವೇಣುಗೋಪಾಲ್ ಡಿ., ಪ್ರಧಾನ ಕಾರ್ಯದರ್ಶಿ ಡಾ.ಅರ್ಚಿತ್ ಬೋಳೂರ್ ಉಪಸ್ಥಿತರಿದ್ದರು.
Published on

ಮಂಗಳೂರು: ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮಂಗಳೂರು ಶಾಖೆಯ ವತಿಯಿಂದ ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆ ಹಚ್ಚುವಿಕೆ ವಿಷಯದ ಕುರಿತು ಇತ್ತೀಚೆಗೆ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ ಜರುಗಿತು.

ಕ್ಯಾನ್ಸರ್ ತಜ್ಞ ಡಾ.ರಚನ್ ಶೆಟ್ಟಿ ಮಾತನಾಡಿ,ಆರಂಭಿಕ ಹಂತದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪತ್ತೆ ಹಚ್ಚುವುದರಿಂದ ರೋಗಿ ಶೀಘ್ರ ಗುಣಮುಖರಾಗಲು ಸಾಧ್ಯ. ರೋಗ ಪತ್ತೆ ಹಚ್ಚುವ ನಿಟ್ಟಿನಲ್ಲಿ ವೈದ್ಯಕೀಯ ತಜ್ಞರ ಪಾತ್ರ ಮಹತ್ತರವಾಗಿದೆ ಎಂದರು.

ಕ್ಯಾನ್ಸರ್ ತಜ್ಞ ಡಾ.ಸಾನ್ಯೋ ಪಿ.ಡಿ.ಸೋಜ ಅವರು ಮಾತನಾಡಿ, ಸೂಕ್ತ ವೈದ್ಯಕೀಯ ಪರೀಕ್ಷೆಯ ಮೂಲಕ ಸ್ತನ ಕ್ಯಾನ್ಸರ್ ಇರುವುದನ್ನು ಪತ್ತೆ ಮಾಡಿ, ಗುಣಪಡಿಸಬಹುದಾಗಿದೆ ಎಂದರು. ಬಳಿಕ ಕ್ಯಾನ್ಸರ್ ಕಾಯಿಲೆಯ ನಿಯಂತ್ರಣದ ಬಗ್ಗೆ ಸಂವಾದ ನಡೆಯಿತು.

ಐಎಂಎ ಅಧ್ಯಕ್ಷ ಡಾ.ವೇಣುಗೋಪಾಲ್ ಡಿ. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡಾ.ಅರ್ಚಿತ್ ಬೋಳೂರ್ ಮಾಸಿಕ ವರದಿ ವಾಚಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net