ನೂತನ ಪದಾಧಿಕಾರಿಗಳ ಪದಗ್ರಹಣ; ಐಎಂಎ ಅಧ್ಯಕ್ಷರಾಗಿ ಡಾ. ಸತೀಶ ಇರಕಲ್

3 Dwd 2
Published on

ಧಾರವಾಡ: ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐಎಂಎ) ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಲ್ಲಿನ ಯು.ಬಿ. ಹಿಲ್‌ನಲ್ಲಿರುವ ಐಎಂಎ ಹಾಲ್‌ನಲ್ಲಿ ಭಾನುವಾರ ನಡೆಯಿತು.
ಐಎಂಎ ಅಧ್ಯಕ್ಷರಾಗಿ ಶ್ರೇಯಾ ಆಸ್ಪತ್ರೆಯ ಎಲುಬು ಕೀಲು ತಜ್ಞ ಡಾ. ಸತೀಶ ಇರ್ಕಲ್, ಕಾರ್ಯದರ್ಶಿಯಾಗಿ ಕ್ರೀಡಾ ವೈದ್ಯ ಡಾ. ಕಿರಣ ಕುಲಕರ್ಣಿ, ಖಜಾಂಚಿಯಾಗಿ ಎಲುಬು ಕೀಲು ತಜ್ಞ ಡಾ. ಸಪನ್ ಡಿ.ಎಸ್. ಅಽಕಾರ ವಹಿಸಿಕೊಂಡರು.
ಮಹಿಳಾ ವೈದ್ಯಕೀಯ ವಿಭಾಗದ ನೂತನ ಅಧ್ಯಕ್ಷರಾಗಿ ಡಾ. ಕವಿತಾ ಮಂಕಣಿ ಹಾಗೂ ಕಾರ್ಯದರ್ಶಿಯಾಗಿ ಡಾ. ಪಲ್ಲವಿ ದೇಶಪಾಂಡೆ ಅಽಕಾರ ವಹಿಸಿಕೊಂಡರು.
2022- 23ನೇ ಸಾಲಿನ ಐಎಂಎ ಅಧ್ಯಕ್ಷರಾರಾಗಿದ್ದ ಡಾ. ವಾಣಿ ಇರಕಲ್ ಹಾಗೂ ಕಾರ್ಯದರ್ಶಿಯಾಗಿದ್ದ ಡಾ. ಉಮಾ ಸುಲ್ತಾನಪುರಿ ಅವರು ಅತ್ಯುತ್ತಮ ಕಾರ್ಯನಿರ್ವಹಣೆ ಪರಿಗಣಿಸಿ ರಾಜ್ಯ ಮಹಿಳಾ ಘಟಕದಿಂದ ಸನ್ಮಾನಿಸಲಾಯಿತು.
ಅತಿಥಿಯಾಗಿ ಪಾಲ್ಗೊಂಡಿದ್ದ ಅಸೋಸಿಯೇಶನ್ ರಾಜ್ಯ ಅಧ್ಯಕ್ಷ ಡಾ. ಎಸ್. ಶ್ರೀನಿವಾಸ ಮಾತನಾಡಿ, ಐಎಂಎ ಧಾರವಾಡದ ಅತ್ಯಂತ ಹಳೆಯ ಸಂಘವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ. ಸಂಘದಿAದ ಅನೇಕ ವೈದ್ಯರು ರಾಜ್ಯ ಮತ್ತು ಸೆಂಟ್ರಲï ಸಂಘದಲ್ಲಿ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಎಸ್‌ಡಿಎA ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನ ಕುಮಾರ್ ಅತಿಥಿಯಾಗಿ ಪಾಲ್ಗೊಂಡಿದ್ದರು. ನೂತನ ಅಧ್ಯಕ್ಷ ಡಾ. ಸತೀಶ ಇರಕಲ್ ಮಾತನಾಡಿದರು. ಡಾ. ಗಿರೀಶ ನಾಡಿಗೇರ, ಡಾ. ವೈ.ಎನ್. ಇರ್ಕಲ್, ಡಾ. ರಾಜನ್ ದೇಶಪಾಂಡೆ, ಡಾ. ಛಬ್ಬಿ, ಡಾ. ಪುರಾಣಿಕ, ಡಾ. ದಿಲೀಪ್ ದೇಶಪಾಂಡೆ, ಡಾ. ರವೀಂದ್ರ ಜೋಶಿ, ಡಾ. ಸುಹಾಸ ಹಂಚಿನಮನಿ, ಡಾ. ಜಗದೀಶ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net