ಐಎಂಎ ಹುಬ್ಬಳ್ಳಿ ಶಾಖೆಗೆ ಡಾ. ಮೂಲಿಮನಿ ಅಧ್ಯಕ್ಷ

ima
Published on

ಹುಬ್ಬಳ್ಳಿ: ಭಾರತೀಯ ವೈದ್ಯಕೀಯ ಸಂಘ (ಐಎಂಎ) ಹುಬ್ಬಳ್ಳಿ ಶಾಖೆಗೆ 2023-24ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ನಗರದ ಐಎಂಎ ಕಚೇರಿಯಲ್ಲಿ ಇತ್ತೀಚೆಗೆ ಆಯ್ಕೆ ಮಾಡಲಾಯಿತು.

ಡಾ. ವೆಂಕಟೇಶ ಮೂಲಿಮನಿ (ಅಧ್ಯಕ್ಷ), ಡಾ. ಪ್ರಭು ಬಿರಾದಾರ (ಉಪಾಧ್ಯಕ್ಷ), ಡಾ. ಆನಂದ ವರ್ವ (ಕಾರ್ಯದರ್ಶಿ), ಡಾ. ಶೀತಲ್ ಹಿರೇಗೌಡರ (ಖಜಾಂಚಿ) ಅವರನ್ನು ಆಯ್ಕೆ ಮಾಡಲಾಯಿತು.

ಐಎಂಎ ಮಹಿಳಾ ವೈದ್ಯರ ಘಟಕಕ್ಕೆ ಡಾ. ಭಾರತಿ ಭಾವಿಕಟ್ಟಿ (ಚೇರ್ಪರ್ಸನ್), ಡಾ. ಸವಿತಾ ರಾಯಚೂರ (ವೈಸ್ ಚೇರ್ಪರ್ಸನ್), ಡಾ. ಆಶಾ ಎಂ. ಪಾಟೀಲ (ಕಾರ್ಯದರ್ಶಿ), ಡಾ. ಶಿಲ್ಪಾ ಎಸ್. ಚಾಟ್ನಿ (ಖಜಾಂಚಿ ) ಅವರನ್ನು ಆಯ್ಕೆ ಮಾಡಲಾಯಿತು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯ (ಅಕಾಡೆಮಿಕ್)ದ ಡಾ. ಶ್ಯಾಮಸುಂದರ ಕೆ. ಜೋಶಿ ಅತಿಥಿಗಳಾಗಿ ಆಗಮಿಸಿದ್ದರು.

ಐಎಂಎ ಹುಬ್ಬಳ್ಳಿ ಶಾಖೆ ನಿರ್ಗಮಿತ ಅಧ್ಯಕ್ಷ ಡಾ. ಸುಭಾಷ ಬಬ್ರುವಾಡ, ಡಾ.ವಿವೇಕ ಪಾಟೀಲ, ಡಾ. ಶಶಿಧರ ಕೆ., ಡಾ. ಶಶಿಕಲಾ ಹೊಸಮನಿ, ಡಾ. ಯು.ಟಿ. ಕಾಂಚನಾ, ಡಾ. ವಿದ್ಯಾಶ್ರೀ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net