ಐಎಂಎ ರಾಜ್ಯ ಶಾಖೆಯಿಂದ 16 ವೈದ್ಯರಿಗೆ ಶಿಕ್ಷಕ ದಿನಾಚರಣೆ ಪ್ರಶಸ್ತಿ

IMA
Published on

ಬೆಂಗಳೂರು: ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕರ್ನಾಟಕ ಶಾಖೆಯ 2022ನೇ ಸಾಲಿನ ಶಿಕ್ಷಕ ದಿನಾಚರಣೆ ಪ್ರಶಸ್ತಿ ಪ್ರಕಟಿಸಿದ್ದು, ವೈದ್ಯಕೀಯ ಕಾಲೇಜುಗಳಲ್ಲಿ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 16 ವೈದ್ಯರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ರಾಯಚೂರಿನ ಡಾ. ಅರವಿಂದ ಕುಮಾರ್, ಮಂಗಳೂರಿನ ಡಾ. ಎಂ. ಚಕ್ರಪಾಣಿ, ಬೆಂಗಳೂರಿನ ಡಾ. ಜಿ.ವಿ. ದಿವಾಕರ್, ವಿಜಯಪುರದ ಡಾ. ಗುರುಶಾಂತಪ್ಪ, ಬಾಗಲಕೋಟೆಯ ಡಾ. ಕಲಡಗಿ ಪಾಂಡವೀರಪ್ಪ, ಬೆಂಗಳೂರಿನ ಡಾ. ಕೆ.ವಿ. ಮಾಲಿನಿ, ಡಾ. ಆರ್. ನಾಗರತ್ನಾ , ಕೋಲಾರದ ಡಾ. ಎಂ. ನಾರಾಯಣಸ್ವಾಮಿ, ಚಿತ್ರದುರ್ಗದ ಡಾ. ಎನ್.ಬಿ. ಪ್ರಹ್ಲಾದ್, ಮಣಿಪಾಲ್‌ನ ಡಾ. ಶರತ್ ಕುಮಾರ್ ರಾವ್, ಹಾಸನದ ಡಾ. ಟಿ.ಆರ್. ಸುಧಾ, ಚಾಮರಾಜನಗರದ ಡಾ. ಜಿ.ಎಂ. ಸಂಜೀವ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶಿವಮೊಗ್ಗದ ಡಾ. ಕೆ.ಎಸ್. ಗಂಗಾಧರ್, ವಿಜಯಪುರದ ಡಾ. ಕೆ. ಸುರೇಶ್, ಚಿಕ್ಕಬಳ್ಳಾಪುರದ ಡಾ. ಎಚ್.ವಿ. ವೆಂಕಟೇಶ್ ಹಾಗೂ ಬೆಂಗಳೂರಿನ ಡಾ.ಎಸ್.ಟಿ. ಯಾವಗಲ್ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸೆ.4ರಂದು ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನ ಐಎಂಎ ಕಚೇರಿಯ ಡಾ.ಎಂ.ಎ. ನರಸಿಂಹಾಚಾರ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಕಾರ್ಯದರ್ಶಿ ಡಾ.ಎಸ್.ಎಂ. ಪ್ರಸಾದ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net