ಆರ್ಯುವೇದ ಶಿಕ್ಷಣ ತಿದ್ದುಪಡಿ ಅಧಿಸೂಚನೆ ಹಿಂಪಡೆಯಲಿ

web 2
Published on

ಚಿಕ್ಕಮಗಳೂರು: ಸ್ನಾತಕೋತ್ತರ ಆರ್ಯುವೇದ ಶಿಕ್ಷಣ ತಿದ್ದುಪಡಿ ನಿಯಮಾವಳಿಗಳ ಅಧಿಸೂಚನೆ ಹಿಂಪಡೆಯುವಂತೆ ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘದಿಂದ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್​ನ ಇತ್ತೀಚಿನ ನಡೆಯಿಂದಾಗಿ ದೇಶದ ಆಧುನಿಕ ವೈದ್ಯಕೀಯ ವೃತ್ತಿ ಕಷ್ಟಕ್ಕೆ ಒಳಗಾಗಿದೆ. ಅಧಿಸೂಚನೆಯಲ್ಲಿ ಎಂಎಸ್ ಶಲ್ಯ ತಂತ್ರ , ಎಂಎಸ್ ಶಾಲಕ್ಯ ತಂತ್ರ ಎಂಬ ಸ್ನಾತಕೋತ್ತರ ಕೋರ್ಸ್​ಗಳನ್ನು ಸೇರ್ಪಡೆ ಮಾಡಲಾಗಿದೆ. ಶಲ್ಯ ತಂತ್ರ ಹಾಗೂ ಶಾಲಕ್ಯ ತಂತ್ರಗಳ ವಿಷಯಗಳಲ್ಲಿ ಆಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳ ದೀರ್ಘ ಪಟ್ಟಿ ಸೇರಿಸಲಾಗಿದೆ. ಆದರೆ ಆಗಿನ ಭಾರತೀಯ ವೈದ್ಯಕೀಯ ಮಂಡಳಿ ಶಿಫಾರಸಿನಂತೆ ಈ ಎಲ್ಲ ಶಸ್ತ್ರಚಿಕಿತ್ಸೆಗಳೂ ಆಧುನಿಕ ವೈದ್ಯಕೀಯ ಶಾಸ್ತ್ರದ ಪರಿಮಿತಿಯೊಳಗೆ ಬರುತ್ತವೆ ಎಂದು ತಿಳಿಸಿದರು.

ಆಧುನಿಕ ಬೆಳವಣಿಗೆಗಳು ಮನುಕುಲದ ಒಂದು ಸಾಮಾನ್ಯ ಪರಂಪರೆಯಾದ್ದರಿಂದ ಈ ಶಸ್ತ್ರ ಚಿಕಿತ್ಸೆಗಳನ್ನು ಆರ್ಯುವೇದದಲ್ಲಿ ಸೇರಿಸಬಹುದೆಂಬುದು ಆಯುಷ್ ಸಚಿವಾಲಯದ ವಿಚಿತ್ರ ಸ್ಪಷ್ಟನೆ. ಆದರೆ ವೈದ್ಯಕೀಯ ವ್ಯವಸ್ಥೆ ಮಿಶ್ರಗೊಳಿಸುವುದನ್ನು ಐಎಂಎ ಖಂಡಿಸುತ್ತದೆ. ಇದು ಖಿಚಡಿ ವ್ಯವಸ್ಥೆಗೆ ದಾರಿ ಮಾಡುತ್ತದೆಯಾದ್ದರಿಂದ ಒಪ್ಪುವಂತದ್ದಲ್ಲ. ಅಲ್ಲದೆ ತಿದ್ದುಪಡಿಗಳನ್ನು ಪ್ರತ್ಯೇಕತೆಯಲ್ಲಿ ನೋಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net