ರೋಷನ್​ ಬೇಗ್​ಗೆ ಮತ್ತೆ ಜೈಲೂಟ ಫಿಕ್ಸ್​

Roshan Beig
Published on

ಬೆಂಗಳೂರು: ಅನಾರೋಗ್ಯದ ಹಿನ್ನೆಲೆ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಶಾಸಕ ರೋಷನ್ ಬೇಗ್​ರನ್ನು ಮತ್ತೆ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್​ ಮಾಡಲಾಗಿದೆ.

ಐ ಮಾನಿಟರಿ ಅಡ್ವೈಸರಿ (ಐಎಂಎ) ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ರೋಷನ್​ ಬೇಗ್​ರನ್ನು ಬಂಧಿಸಿದ್ದರು. ನ್ಯಾಯಾಂಗ ಬಂಧನದಲ್ಲಿರುವ ಬೇಗ್​, ಮಧುಮೇಹ, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

ಸೋಮವಾರ ರೋಷನ್​ ಬೇಗ್​ ಅವರನ್ನು ಜಯದೇವ ಆಸ್ಪತ್ರೆಯಿಂದ ಜೈಲಿಗೆ ಸ್ಥಳಾಂತರಿಸಲಾಗಿದೆ. ಸದ್ಯ ಜೈಲಿನಲ್ಲೇ ಪ್ರತ್ಯೇಕ ಕೋಣೆಯಲ್ಲೇ ಬೇಗ್​ಗೆ ವೈದ್ಯರು ಚಿಕಿತ್ಸೆ ಮುಂದುವರಿಸಲಿದ್ದಾರೆ.

ಮುಂದಿನ ಕೋರ್ಟ್ ಆದೇಶ ಅಥವಾ ಬೇಲ್ ಸಿಗುವವರೆಗೂ ಬೇಗ್ ಜೈಲಿನಲ್ಲೇ ಇರಬೇಕಿದೆ. ಹೆಚ್ಚಿನ ತನಿಖೆಗಾಗಿ ಬೇಗ್​ರನ್ನು ಸಿಬಿಐ ಕಸ್ಟಡಿಗೆ ಕೇಳಿತ್ತು. ಆದರೆ ಆ ಸಮಯವನ್ನು ಅನಾರೋಗ್ಯದಿಂದ ಆಸ್ಪತ್ರೆಯಲ್ಲೇ ಬೇಗ್​ ಕಳೆದಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೋರ್ಟ್‌ ಆದೇಶದ ನಂತರ ಸಿಬಿಐ ಕಸ್ಟಡಿಗೆ ನೀಡುವ‌ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net