ಐಎಲ್‌ವೈಎಫ್ ಅಧ್ಯಕ್ಷ ಪ್ರತಾಪ್ ನಂಜುಂಡಾರಾಧ್ಯ ಪದಗ್ರಹಣ

ILYF - pratap
Published on

ಬೆಂಗಳೂರು: ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ (ಐಎಲ್ವೈಎ್) ಅಧ್ಯಕ್ಷರಾಗಿ ಪ್ರತಾಪ್ ನಂಜುಂಡಾರಾಧ್ಯ ಆಯ್ಕೆಯಾಗಿದ್ದಾರೆ. ಇತ್ತೀಚಿಗೆ ಬೆಂಗಳೂರು ಬಸವ ಸಮಿತಿಯಲ್ಲಿ ನಡೆದ ವೇದಿಕೆಯ ಸಾಮಾನ್ಯ ಸರ್ವ ಸದಸ್ಯರ ಸಭೆಯಲ್ಲಿ ಅವರು ಪದಗ್ರಹಣ ಮಾಡಿದರು. ಜಗತ್ತಿನಾದ್ಯಂತ ಹಲವಾರು ದೇಶಗಳಲ್ಲಿ ತನ್ನ ಅಸ್ತಿತ್ತ್ವವನ್ನು ಸ್ಥಾಪಿಸಿರುವ ವೇದಿಕೆಯು, ಮೈಸೂರು , ಹುಬ್ಬಳ್ಳಿ, ಶಿವಮೊಗ್ಗದಲ್ಲಿ ಶಾಖೆ ಹೊಂದಿದೆ. ಇದೀಗ ಬೆಳಗಾವಿ, ದುಬೈ , ಅಮೇರಿಕ ಹಾಗು ಆಸ್ಟ್ರೇಲಿಯಾದಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲಿದೆ ಎಂದು ತಿಳಿಸಿದರು. ಮುಂದಿನ ವರ್ಷ ಐಎಲ್‌ವೈಎ್ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‌ಕ್ಲೇವ್ ಆಯೋಜಿಸಲಾಗಿದ್ದು, ಇದರಿಂದ ಸಾವಿರಾರು ವ್ಯಾಪಾರಸ್ಥರು ಮತ್ತು ವೃತ್ತಿಪರರಿಗೆ ಅನುಕೂಲವಾಗಲಿದ್ದು, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿ ಸಾಧ್ಯವಾಗಲಿದೆ ಎಂದು ಪ್ರತಾಪ್ ನಂಜುಂಡಾರಾಧ್ಯ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net