ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮಾವೇಶ

ILYF
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ (ಐಎಲ್​ವೈಎಫ್) ವತಿಯಿಂದ ಫೆ. 23ರಿಂದ 25ರವರೆಗೆ ಹುಬ್ಬಳ್ಳಿ ವಿದ್ಯಾನಗರದ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ವೀರಶೈವ ಲಿಂಗಾಯತ ಜಾಗತಿಕ ಉದ್ಯಮ ಸಮಾವೇಶ ಆಯೋಜಿಸಲಾಗಿದೆ ಎಂದು ಸಮಾವೇಶದ ಮುಖ್ಯ ಸಂಚಾಲಕ ಸಂತೋಷ ಕೆಂಚಾಂಬ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಉತ್ಪನ್ನಗಳು ಮತ್ತು ಸೇವೆಗಳ 200ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. 23ರಂದು ಸಂಜೆ 4ಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು.

24ರಂದು ಬೆಳಗ್ಗೆ 11.30ಕ್ಕೆ ಉತ್ತರ ಕರ್ನಾಟಕ ಭಾಗ ಭರವಸೆಯ ನವೋದ್ಯಮಗಳು ಎಂಬ ವಿಷಯದ ಕುರಿತ ಚರ್ಚೆಯಲ್ಲಿ ಲೈಫ್​ಟ್ರಾನ್ಸ್​ನ ಡಾ. ಕಿರಣ ಕಂಠಿ, ಅಸ್ಟ್ರಾ ಡಿಫೆನ್ಸ್​ನ ಅಂಕುಶ ಕೊರವಿ, ರಿವೊಟ್ ಮೋಟಾರ್ಸ್​ನ ಅಜಿತ ಪಾಟೀಲ, ಸ್ಪಾಟರ್ ಮೊಬಿಲಿಟಿಯ ಅರುಣ ಅಗಡಿ, ಪ್ರಸಾದ ಪಾಟೀಲ ಹಾಗೂ ಎಐ ಆಧಾರಿತ ಟ್ರಾಫಿಕ್ ಮ್ಯಾನೇಜ್​ವೆುಂಟ್ ಸ್ಟಾರ್ಟಪ್​ನ ಅಗಸ್ಱ ಬೆಲ್ಲದ ಪಾಲ್ಗೊಳ್ಳುವರು.

ಮಧ್ಯಾಹ್ನ 1.15ಕ್ಕೆ ಬಹುಮುಖಿ ವಾಣಿಜ್ಯೋದ್ಯಮಗಳ ನಿರ್ವಹಣೆ ಕುರಿತು ಮ್ಯಾಗ್ನಟೆಕ್ ಕಾರ್ಯನಿರ್ವಾಹಕ ನಿರ್ದೇಶಕ ಭರತ ಬೊಮ್ಮಾಯಿ ಮಾತನಾಡುವರು. ಮಧ್ಯಾಹ್ನ 3 ಗಂಟೆಗೆ ಭವಿಷ್ಯದ ಕ್ರಾಂತಿಕಾರಕ ಹೆಜ್ಜೆಗಳು: ಒಂದು ದೂರದೃಷ್ಟಿ ಎಂಬ ಸಂವಾದದಲ್ಲಿ ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ ಡಾ. ಆನಂದ ಸಂಕೇಶ್ವರ ಪಾಲ್ಗೊಳ್ಳುವರು. ಸಂಜೆ 5.30ಕ್ಕೆ ವೈದ್ಯಕೀಯ ಕ್ಷೇತ್ರದ ಉದ್ಯಮಶೀಲತೆ ಚರ್ಚೆಯಲ್ಲಿ ಎಚ್​ಸಿಜಿ ಎಂಡಿ ಡಾ. ಅಜಯಕುಮಾರ್, ಮೆಡಿಸಿಂಕ್ ಹೆಲ್ತ್ ಮ್ಯಾನೇಜ್​ವೆುಂಟ್ ಸರ್ವಿಸಸ್​ನ ಸಂಸ್ಥಾಪಕ ಚೇರ್ಮನ್ ಡಾ. ನಾಗೇಂದ್ರ ಸ್ವಾಮಿ, ಓ3 ವೆಲ್ತ್ ಆಂಡ್ ಅಸೆಟ್ ಮ್ಯಾನೇಜ್​ವೆುಂಟ್ ನಿರ್ದೇಶಕ ಸುದೀಪ, ಹುಬ್ಬಳ್ಳಿ ನಾಲವಾಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಾ. ಮಹೇಶ ನಾಲವಾಡ ಪಾಲ್ಗೊಳ್ಳುವರು. ಸುಮಾರು 300 ವೈದ್ಯರು ಭಾಗವಹಿಸುವರು ಎಂದು ತಿಳಿಸಿದರು.

25ರಂದು ಬೆಳಗ್ಗೆ 10.30ರಿಂದ ಸಂಜೆ 5.30ರವರೆಗೆ ವಿವಿಧ ವಿಷಯಗಳ ಮೇಲಿನ ಚರ್ಚೆಯಲ್ಲಿ ಕ್ರೀಮ್ ಸ್ಟೋನ್ ಕಾನ್ಸೆಪ್ಟ್ಸ್ನ ಶೀತಲ್ ಪಾಟೀಲ, ಟ್ರು ಎಲ್ಟ್ ಎನರ್ಜಿಯ ಸಂಸ್ಥಾಪಕ ವಿಜಯ ನಿರಾಣಿ, ಲಾಜಿಕ್ ಪ್ರೖೆವೇಟ್ ಲಿಮಿಟೆಡ್​ನ ನಿರ್ದೇಶಕ ಪಂಕಜ ಬೆಲ್ಲದ, ವಯಾವ್ಯ ಲ್ಯಾಬ್ ಸಿಇಒ ಆರ್.ಕೆ. ಪಾಟೀಲ, ಲ್ಯಾಬಿನ್ ಆಪ್ ಸಹ ಸಂಸ್ಥಾಪಕ ಗಿರೀಶ ಶಿರಗಣ್ಣವರ್, ಮೊಟೊಕ್ರಾಸ್ ಇಂಡಿಯಾ ಸಂಸ್ಥಾಪಕ ಕರಣ ಜವಳಿ, ನ್ಯಾಚುರಲ್ಸ್ ಸಲೂನ್ ಆಂಡ್ ಸ್ಪಾ ಸಿಇಒ ಸಿ.ಕೆ. ಕಮರವೇಲ್ ಭಾಗವಹಿಸುವರು.

ಸಂಜೆ 5.30ಕ್ಕೆ ಸಮಾರೋಪ ಸಮಾರಂಭದಲ್ಲಿ ಸಚಿವರಾದ ಎಂ.ಬಿ. ಪಾಟೀಲ, ಲಕ್ಷ್ಮೀ ಹೆಬ್ಬಾಳ್ಕರ್, ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಮಾಜಿ ಸಿಎಂಗಳಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಇತರರು ಪಾಲ್ಗೊಳ್ಳುವರು. ಬಳಿಕ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಚನ್ನು ಹೊಸಮನಿ, ರಮೇಶ ಪಾಟೀಲ, ರವಿರಾಜ ಕಮ್ಮಾರ, ಶಶಿಧರ ಶೆಟ್ಟರ್, ಸಿದ್ದು ಮಠದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net