

ಪರಶುರಾಮಪುರ: ಮಾನವನಲ್ಲಿ ಈಚೆಗೆ ಹೆಚ್ಚು ರೋಗಗಳು ಕಾಣಿಸಿಕೊಳ್ಳಲು ಸ್ವಚ್ಛತೆ ಕಣ್ಮರೆ ಹಾಗೂ ಪೌಷ್ಟಿಕ ಆಹಾರ ಸೇವನೆಯಲ್ಲಿ ನಿರ್ಲಕ್ಷೃವೇ ಮುಖ್ಯ ಕಾರಣ ಎಂದು ಪಿಡಿಒ ದೇವೇಂದ್ರಪ್ಪ ಹೇಳಿದರು
ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಸ್ಥಳೀಯ ಆಡಳಿತ ಹಾಗೂ ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸಹಯೋಗದಲ್ಲಿ ಬೆಳಗೆರೆ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಪೋಷಣ್ ಅಭಿಯಾನ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತೀ ಜನವಸತಿ ಪ್ರದೇಶಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ, ಆಶಾ ಕಾರ್ಯಕರ್ತೆಯರು ಮಹಿಳೆಯರು, ಮಕ್ಕಳು, ವಯೋವೃದ್ಧರು ಮತ್ತು ಹದಿಹರೆಯವರಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯ ಹಾಗೂ ಆರೋಗ್ಯದ ಕುರಿತು ಅರಿವು ಮೂಡಿಸಬೇಕು ಎಂದರು.
ಮೇಲ್ವಿಚಾರಕಿ ತಿಪ್ಪಮ್ಮ ಮಾತನಾಡಿದರು. ಬೆಲ್ಲ, ಸೊಪ್ಪು, ಮೊಳಕೆ ಕಾಳು, ದ್ವಿದಳ ದಾನ್ಯಗಳು, ನುಗ್ಗೆ ಸೊಪ್ಪು, ಮತ್ತಿತರ ದಿನಸಿ ಸಾಮಾನುಗಳನ್ನು ಆಕರ್ಷಕವಾಗಿ ಇಟ್ಟು ಅವುಗಳ ಬಳಕೆ ಕುರಿತು ಅರಿವು ಮೂಡಿಸಲಾಯಿತು. ಮೇಲ್ವಿಚಾರಕಿ ತಿಪ್ಪಮ್ಮ, ಅಂಗನವಾಡಿ ಕಾರ್ಯಕರ್ತರಾದ ಲಕ್ಷ್ಮೀದೇವಿ, ಸುಜಾತಾ, ಭಾರತಿ, ತಿಪ್ಪಮ್ಮ, ಈರಮ್ಮ, ಜ್ಯೋತಿ, ಮಹಾಲಕ್ಷ್ಮೀ, ಸರೋಜಾ ಇದ್ದರು.