ಅಕ್ರಮ ಸಾಗವಾನಿ ಕಟ್ಟಿಗೆ ವಶ

Timber sized
Published on

ಮುಂಡಗೋಡ: ತಾಲೂಕಿನ ರಾಮಾಪುರ ಗ್ರಾಮದಿಂದ ಓಮ್ನಿ ವಾಹನದಲ್ಲಿ ಅಕ್ರಮವಾಗಿ ಸಾಗುವಾನಿ ಕಟ್ಟಿಗೆ ಸಾಗಿಸುತ್ತಿರುವಾಗ ಅರಣ್ಯ ಇಲಾಖೆಯವರು ದಾಳಿ ನಡೆಸಿ ಕಟ್ಟಿಗೆ ಹಾಗೂ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ರಾಮಾಪುರ ಗ್ರಾಮದ ಕಾಂತೇಶ ಭೀಮಯ್ಯ ಈಳಿಗೇರ ತನ್ನ  ಓಮ್ನಿ ವಾಹನದಲ್ಲಿ ಸುಮಾರು 22 ಸಾವಿರ ರೂ. ಮೌಲ್ಯದ ಮುರು ಅಡಿ ಉದ್ದದ 4ಸಾಗುವಾನಿ ತುಂಡುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ವಾಹನ ಬೆನ್ನಟ್ಟಿದಾಗ ಆರೋಪಿಯು ಕಾರನ್ನು ಗದ್ದೆಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಅರಣ್ಯ ಇಲಾಖೆಯವಾರು ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.
ಎಸಿಎಫ್ ರವಿಕುಮಾರ್ ಹುಲಕೊಟಿ,ಆರ್ ಎಫ್ ಒ ಎಂ.ಎಚ್.ನಾಯ್ಕ ಮಾರ್ಗದಶ೯ನದಲ್ಲಿ ಉಪ ವಲಯ ಅಣ್ಯಾಧಿಕಾರಿ ಚಂದ್ರಕಾಂತ ಮುಕ್ರಿ,ಅರಣ್ಯ ರಕ್ಷಕ ಮುತ್ತು ಹಳ್ಳಿ,ಸಿಬ್ಬಂದಿ ನಾರಾಯಣ ಓಣಿಕೇರಿ,ಪ್ರಕಾಶ ಬಳ್ಳಾರಿ,ಜಗದೀಶ ಗೌಡ ದಾಳಿಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net