ಜಾನುವಾರು ಅಕ್ರಮ ಸಾಗಾಟ

17012019 Raichur cattle protection
Published on

ಕುಂದಾಪುರ: ಲಾರಿಯಲ್ಲಿ ಕೋಣಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ವರನ್ನು ಶನಿವಾರ ಹೊಸಂಗಡಿ ಚೆಕ್‌ಪೋಸ್ಟ್ ಬಳಿ ಅಮಾಸೆಬೈಲು ಪೊಲೀಸರು ಬಂಧಿಸಿ ಲಾರಿ ವಶಕ್ಕೆ ಪಡೆದು 30 ಕೋಣಗಳನ್ನು ರಕ್ಷಿಸಿದ್ದಾರೆ.

ಹರಿಯಾಣ ಪಾತೆಬಾದ್ ಜಿಲ್ಲೆಯ ಮಂಜಿತ್ ಸಿಂಗ್(38), ರಾಜಸ್ಥಾನ ಮೂಲದ ಪವನ್ ಕುಮಾರ್(32), ಉತ್ತರ ಪ್ರದೇಶ ಮೂಲದ ಗುಲ್ವಾಂ(29) ಹರಿಯಾಣ ಮೂಲದ ರವಿಕುಮಾರ್(25) ಬಂಧಿತರು.

ಅಮಾಸೆಬೈಲು ಠಾಣೆ ಪಿಎಸ್‌ಐ ಹಾಗೂ ಸಿಬ್ಬಂದಿ ಹೊಸಂಗಡಿ ಚೆಕ್‌ಪೋಸ್ಟ್ ಬಳಿ ಶನಿವಾರ ಬೆಳಗ್ಗೆ ಹುಲಿಕಲ್ ಘಾಟಿ ಕಡೆಯಿಂದ ಹೊಸಂಗಡಿಯತ್ತ ಬರುತ್ತಿದ್ದ ಲಾರಿಯನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ವಾಹನದ ಹಿಂದುಗಡೆ ಟರ್ಪಾಲು ಮುಚ್ಚಿದ ಬಾಡಿಯಲ್ಲಿ 30 ಕೋಣಗಳಿದ್ದವು. ಅವುಗಳಿಗೆ ಯಾವುದೇ ಆಹಾರ ನೀಡದೆ ಒಂದಕ್ಕೊಂದು ತಾಗಿಕೊಂಡು ಮಿಸುಕಾಡದಂತೆ ಹಿಂಸ್ಮಾತಕವಾಗಿ ಕಟ್ಟಿ ಹಾಕಿ ತುಂಬಿದ್ದುದು ಪತ್ತೆಯಾಗಿತ್ತು. ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net