ಮದುವೆಯಾದ ಎರಡೇ ತಿಂಗಳಿಗೆ ಪತ್ನಿ ಕೊಂದ ಪತಿ: ತನಿಖೆಯಲ್ಲಿ ಸ್ಪೋಟಕ ಸತ್ಯ ಬಹಿರಂಗ

Wife Murder
Published on

ಚಿತ್ರದುರ್ಗ: ಮದುವೆಯಾದ ಎರಡೇ ತಿಂಗಳಿಗೆ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಹೊಸದುರ್ಗ ತಾಲೂಕಿನ ಮೆಟ್ಟಿಲಹೊಳೆ ಗ್ರಾಮದಲ್ಲಿ ನಡೆದಿದೆ.

ಉಮಾ(19) ಪತಿಯಿಂದಲೇ ಕೊಲೆಯಾದ ನವ ವಿವಾಹಿತೆ. ಚಂದ್ರಪ್ಪ(27) ಆರೋಪಿ. ಈ ಜೋಡಿ 2020ರ ಮೇ 28 ರಂದು ಮದುವೆಯಾಗಿದ್ದರು. ಇದೀಗ ಜುಲೈ 28ರಂದು ಪತ್ನಿಯನ್ನೇ ಕೊಲೆಗೈದಿದ್ದಾನೆ.

ಚಂದ್ರಪ್ಪನಿಗೆ ಬೇರೆ ಹೆಂಗಸಿನ ಜೊತೆ ಅಕ್ರಮ ಸಂಬಂಧ ಇತ್ತಂತೆ. ಇದನ್ನು ಪ್ರಶ್ನಿಸಿದ್ದಕ್ಕೆ ವೇಲ್ ನಿಂದ ಬಿಗಿದು ಪತ್ನಿ ಕೊಲೆ ಮಾಡಿದ್ದಾನೆ. ಬಳಿಕ ನೇಣು ಹಾಕಿಕೊಂಡಿದ್ದಾಳೆ ಎಂದು ಬಿಂಬಿಸಲು ಆರೋಪಿ ಯತ್ನಿಸಿದ್ದಾನೆ ಎಂದು ಆರೋಪ ಕೇಳಿಬಂದಿದೆ.

ಚಿತ್ರಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಾನೇ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆಂದು ಚಿತ್ರದುರ್ಗ ಎಸ್ಪಿ ಜಿ.ರಾಧಿಕಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net