ವಶಕ್ಕೆ ಪಡೆದಿದ್ದ ಅಕ್ರಮ ಮದ್ಯ ನಾಶ

20-GPT-1
ಗುಂಡ್ಲುಪೇಟೆ ಪಟ್ಟಣದ ಅಬಕಾರಿ ಕಚೇರಿ ಎದುರು ಜಪ್ತಿ ಮಾಡಿದ್ದ ಮದ್ಯವನ್ನು ಅಧಿಕಾರಿಗಳು ನಾಶಪಡಿಸಿದರು.
Published on

ಗುಂಡ್ಲುಪೇಟೆ: ಅಕ್ರಮ ಸಾಗಣೆ ಹಾಗೂ ಮಾರಾಟ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಶುಕ್ರವಾರ ನಾಶಪಡಿಸಲಾಯಿತು. ತಾಲೂಕು ಕಚೇರಿಯ ಸಂಕೀರ್ಣದಲ್ಲಿ 29 ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದು ಅವಧಿ ಮೀರಿದ ಅಂದಾಜು 55,000 ರೂ. ಮೌಲ್ಯದ 126.810 ಲೀಟರ್ ಮದ್ಯ ಹಾಗೂ 13.500 ಲೀಟರ್ ಬಿಯರ್ ಅನ್ನು ನಾಶಪಡಿಸಲಾಯಿತು. ಚಾಮರಾಜನಗರ ಉಪವಿಭಾಗ ಅಧಿಕಾರಿ ಎಂ.ಡಿ.ಮೋಹನ್‌ಕುಮಾರ್, ತಾಲೂಕು ಕಚೇರಿ ಸಿಬ್ಬಂದಿ ಮಿಥುನ್ ಕುಡುಚಿ, ಗುಂಡ್ಲುಪೇಟೆ ವಲಯ ಅಬಕಾರಿ ನಿರೀಕ್ಷಕ ಕೆ. ತನ್ವೀರ್, ಉಪವಿಭಾಗದ ಅಬಕಾರಿ ನಿರೀಕ್ಷಕ ಎಂ.ಬಿ. ಉಮಾಶಂಕರ, ಕೆ.ಎಸ್.ಬಿ.ಸಿ. ಸಿದ್ದರಾಜು, ಹಾಗೂ ವಲಯ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net