ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದವರ ಬಂಧನ

Published on

ಹಾನಗಲ್ಲ: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ 14 ಜಾನುವಾರುಗಳನ್ನು ರಸಿದ ಟನೆ ತಾಲೂಕಿನ ಆರೇಲಕ್ಮಾಪುರ ಗ್ರಾಮದ ಬಳಿ ಬುಧವಾರ ನಡೆದಿದೆ.
ಬ್ಯಾಡಗಿ ತಾಲೂಕು ಕಾಗಿನೆಲೆ ಗ್ರಾಮದ ಮೋಹಿದ್ದಿನ ಅಬ್ದುಲಮಜೀದ ಬೇಪಾರಿ ಹಾಗೂ ಜಬಿವುಲ್ಲಾ ಅಬ್ದುಲಮಜೀದ್​ ಬೇಪಾರಿ ಬಂಧಿತ ಆರೋಪಿಗಳು.
ಇವರು ಅಶೋಕ ಲೇಲ್ಯಾಂಡ್​ ವಾಹನದಲ್ಲಿ ಯಾವುದೇ ಪರವಾನಗಿ ಇಲ್ಲದೆ 14 ಜಾನುವಾರುಗಳನ್ನು ತುಂಬಿಕೊಂಡು ಸಾಗಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಜಾನುವಾರುಗಳ ಸಮೇತ ವಾಹನ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಆಡೂರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net