ಅಕ್ರಮವಾಗಿ ಸಂಗ್ರಹಿಸಿದ್ದ ಮಿಲಿಟರಿ ಮದ್ಯ ಜಪ್ತಿ

Crime
Published on

ಧಾರವಾಡ: ಅಕ್ರಮವಾಗಿ ಮಾರಾಟಕ್ಕೆ ಸಂಗ್ರಹಿಸಿದ್ದ ಮಿಲಿಟರಿ ಮದ್ಯವನ್ನು ಅಬಕಾರಿ ಇಲಾಖೆ ಅಽಕಾರಿಗಳ ತಂಡ ದಾಳಿ ಮಾಡಿ ಜಪ್ತಿ ಮಾಡಿದೆ. ನಗರದ ಗಾಂಧಿ ಚೌಕ್‌ನ ಕುಂಬಾರ ಓಣಿಯಲ್ಲಿನ ಬಸವಣ್ಣೆಪ್ಪ ಮಹಾದೇವಪ್ಪ ಕುಂಬಾರ ಎಂಬುವರ ಮನೆಯಲ್ಲಿ ಮದ್ಯ ಸಂಗ್ರಹಿಸಿ ಇಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕ ಶಿವಾನಂದ ರಾಹುತರ ಹಾಗೂ ಸಿಬ್ಬಂದಿ ಶಿವಾನಂದ ಅರವಳದ, ಅಬಕಾರಿ ಪೇದೆ ಹಾಗೂ ವಾಹನ ಚಾಲಕ ರವಿ ಹಳ್ಯಾಳ ದಾಳಿ ನಡೆಸಿದ್ದಾರೆ. ಸುಮಾರು 2,07,930 ರೂಪಾಯಿ ಮೌಲ್ಯದ 75.750 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net