

ಶೃಂಗೇರಿ: ಸಂಕ್ರಾತಿ ಹಬ್ಬ ರಾಜ್ಯದ ಕತ್ತಲನ್ನು ಹೊರದೂಡಿ ಬೆಳಕನ್ನು ಹೆಚ್ಚಿಸುವ ಮೂಲಕ ಶುದ್ಧ ಹಾಗೂ ಪ್ರಾಮಾಣಿಕ ಆಡಳಿತಕ್ಕೆ ನಾಂದಿಯಾಗ ಬೇಕು ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಹೇಳಿದರು.
ಮೆಣಸೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಡೀ ರಾಜ್ಯಕ್ಕೆ ಇರುವುದು ಒಂದೇ ಕಾನೂನು. ಮತದಾರರು ಹೈಕೋರ್ಟ್‌ನಿಂದ ಮತದಾನದ ಹಕ್ಕನ್ನು ಪಡೆದು ತಾಲೂಕಿನ ಸಹಕಾರಿ ಸಂಸ್ಥೆ ಚುನಾವಣೆಯಲ್ಲಿ ಮತದಾನ ಮಾಡಿರುತ್ತಾರೆ. ಅವರ ಹಕ್ಕಿನ ಪಾಲನೆ ಮಾಡುವುದು ಸಂಬಂಧಪಟ್ಟ ಚುನಾವಣಾಧಿಕಾರಿಗಳ ಕರ್ತವ್ಯ ಎಂದು ಹೇಳಿದರು.
ತಾಲೂಕಿನ ಮೂರು ಾಕ್ಸ್‌ಗಳ ಚುನಾವಣೆಯಲ್ಲಿ ಮತಎಣಿಕೆ ಪ್ರಕ್ರಿಯೆ ಮುಗಿದಿದ್ದು, ಘೋಷಣೆ ಮಾತ್ರ ಬಾಕಿ ಇದೆ. ಹೀಗಿರುವಾಗ ಹಾಲಂದೂರು ಸೊಸೈಟಿ ಚುನಾವಣೆಯಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೈಕೋರ್ಟ್ ಆದೇಶದಲ್ಲಿ ಲಿತಾಂಶ ಘೋಷಣೆ ಮಾಡದಂತೆ ಆದೇಶಿದ್ದು ಎಲ್ಲಿಯೂ ಮತಎಣಿಕೆ ಮಾಡಬಾರದು ಎಂಬ ಉಲ್ಲೇಖ ಇರುವುದಿಲ್ಲ. ಶೃಂಗೇರಿ ಶಾಸಕರು ಉದ್ದೇಶ ಪೂರ್ವಕವಾಗಿ ಎಣಿಕೆ ತಡೆಹಿಡಿದಿದ್ದಾರೆ. ನೇರ ಚುನಾವಣೆ ಗೆಲ್ಲಲಾಗದೇ ವಾಮಾಮಾರ್ಗ ಅನುಸರಿಸಿದ್ದಾರೆ ಎಂದು ಆರೋಪಿಸಿದರು.
ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಡಿ.ಸಿ.ಶಂಕರಪ್ಪ ಮಾತನಾಡಿ, ಬೇಗಾರು, ಕಾವಡಿ, ಶೃಂಗೇರಿ ಸಹಕಾರಿ ಸಂಘಗಳಲ್ಲಿ ಚುನಾವಣೆ ಪ್ರಕ್ರಿಯೆ ಮುಗಿದಿದ್ದು, ಘೋಷಣೆ ಮಾತ್ರ ಬಾಕಿ ಇರಿಸಿಕೊಂಡಿದ್ದಾರೆ. ಆದರೆ ಲಿತಾಂಶ ಘೋಷಿಸ ಬಾರದು ಎಂದು ನ್ಯಾಯಾಲಯದ ಆದೇಶವಿಲ್ಲ. ಹಾಗಾಗಿ ಹಾಲಂದೂರು ಸೊಸೈಟಿಯಲ್ಲಿ ಲಿತಾಂಶ ಘೋಷಣೆ ಮಾಡಬಾರದು ಎಂಬ ಆದೇಶವಿದೆ. ಮತ ಎಣಿಕೆ ಮಾಡಬಾರದು ಎಂಬ ಉಲ್ಲೇಖವಿಲ್ಲ. ಆದರೆ ಮತಎಣಿಕೆ ಮಾಡದೇ ಮತಪೆಟ್ಟಿಗೆಯನ್ನು ಸೋಮವಾರ ಅಭ್ಯರ್ಥಿಗಳ ಗಮನಕ್ಕೂ ತರದೆ ತಾಲೂಕು ಕಚೇರಿ ಖಜಾನೆಯಲ್ಲಿ ಇರಿಸಿರುವುದು ಮತದಾರರಿಗೆ ಮಾಡಿದ ದ್ರೋಹವಾಗಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ತಲಗಾರು ಉಮೇಶ್, ಪ್ರಧಾನ ಕಾರ್ಯದರ್ಶಿ ಎಚ್.ಎಸ್.ವೇಣುಗೋಪಾಲ್, ನೂತನ್‌ಕುಮಾರ್, ಜೆಡಿಎಸ್ ಅಧ್ಯಕ್ಷ ಗಿಣಕಲ್‌ಭರತ್, ಜೆಡಿಎಸ್ ಅಭ್ಯರ್ಥಿ ನಾಗೇಶ್‌ನಾಯ್ಕ ಹಾಜರಿದ್ದರು.