ಎನ್​ಟಿಪಿಸಿ ನೇಮಕಾತಿಯಲ್ಲಿ ಅಕ್ರಮದ ಘಾಟು

Illegality in NTPC recruitment
ಕೂಡಗಿ ಎನ್​ಟಿಪಿಸಿಯ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು ಪರಿಶೀಲಿಸಿ ಅರ್ಹರಿಗೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿ ಪರೀಾರ್ಥಿಗಳು ಜಿಲ್ಲಾಧಿಕಾರಿ ಕಚೇರಿಯ ಮಹಿಪತಿ ದೇಸಾಯಿ ಅವರಿಗೆ ಮನವಿಪತ್ರ ಸಲ್ಲಿಸಿದರು. ಜಯ ಹೂಗಾರ, ಈರಪ್ಪ ಕಾಗಲ್​, ಭೀಮನಗೌಡ ಬಿರಾದಾರ, ಹನುಮಂತ ಪಡಸಲಗಿ ಇತರರಿದ್ದಾರೆ.
Published on

ಗೊಳಸಂಗಿ: ಕೂಡಗಿ ಎನ್​ಟಿಪಿಸಿ ಇತ್ತೀಚೆಗೆ ನಡೆಸಿದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮವೆಸಗಲಾಗಿದೆ ಎಂದು ಲಿಖಿತ ಪರೀೆ ಬರೆದ ಭೂ ಸಂತ್ರಸ್ತರ ಪರೀಾರ್ಥಿಗಳು ಆರೋಪಿಸಿದ್ದಾರೆ.

ಎನ್​ಟಿಪಿಸಿಯಲ್ಲಿ ಖಾಲಿ ಇರುವ ಫಿಟ್ಟರ್​, ಇಲೆಕ್ಟ್ರಿಷಿಯನ್​, ಇನ್ಸು$್ಟ್ರಮೆಂಟ್​ ಮೆಕ್ಯಾನಿಕ್​, ಮೆಟರಿಯಲ್​/ ಸ್ಟೋರ್​ ಕೀಪರ್​ ಸೇರಿ 34 ಹುದ್ದೆಗೆ ಆ.11ರಂದು ಎನ್​ಟಿಪಿಸಿ ವ್ಯಾಪ್ತಿಯ ಕೂಡಗಿ, ಮಸೂತಿ, ತೆಲಗಿ, ಗೊಳಸಂಗಿ ಮತ್ತು ಮುತ್ತಗಿ ಗ್ರಾಮಗಳ ಭೂ ಸಂತ್ರಸ್ತ 73 ಅಭ್ಯರ್ಥಿಗಳು ಲಿಖಿತ ಪರೀೆ ಬರೆದಿದ್ದಾರೆ.

ನ. 6 ರಂದು 20 ಅಭ್ಯರ್ಥಿಗಳಿಗೆ ಮಾತ್ರ ಅವರ ಇ& ಮೇಲ್​ಗೆ ಲಿತಾಂಶ ಪ್ರಕಟಿಸಿ ನೇಮಕಾತಿ ಮಾಡಿಕೊಂಡಿದ್ದಾರೆ. ಬಾಕಿ 53 ಅಭ್ಯರ್ಥಿಗಳ ಲಿತಾಂಶ, ಕಟ್​ಆ್​ ಅಂಕಗಳನ್ನೂ ವೆಬ್​ಸೈಟ್​ನಲ್ಲಿ ಪ್ರಕಟಿಸಿಲ್ಲ. ಈ ಕುರಿತು ಪರೀಾರ್ಥಿಗಳು ನ.8ರಂದು ಎನ್​ಟಿಪಿಸಿಯ ಎಚ್​ಆರ್​ ವಿಭಾಗದ ಮುಖ್ಯಸ್ಥರನ್ನು ಪ್ರಶ್ನಿಸಲು ಹೋದರೂ ಸ್ಪಂದಿಸಿಲ್ಲ.

* ಜಿಲ್ಲಾಧಿಕಾರಿಗೆ ಮನವಿ ಪತ್ರ

ವಿದ್ಯುತ್​ ಉತ್ಪಾದನೆಗಾಗಿ ನಮ್ಮ ಪಾಲಕರು ಭೂಮಿಯನ್ನು ಕೊಟ್ಟಿದ್ದಾರೆ. ಈಗ ನಮಗೆ ಮಾಡಲು ಬೇರೆ ಕೆಲಸವೂ ಇಲ್ಲ, ಭೂಮಿಯೂ ಇಲ್ಲ. ನಮ್ಮ ವಿದ್ಯಾಭ್ಯಾಸದ ಆಧಾರದಲ್ಲಿ ಬೇರೆ ಕಡೆಗೆ ಉದ್ಯೋಗ ಅರಸಲು ಹೆಚ್ಚಿನ ಸಮಯವೂ ನಮಗಿಲ್ಲ. ಈಗಾಗಲೇ ನಮ್ಮ ನೇಮಕಾತಿ ವಯಸ್ಸು ಮೀರುತ್ತಿದೆ. ಹೀಗಾಗಿ ಸಾವೊಂದೇ ನಮಗಿರುವ ಮಾರ್ಗವಾಗಿದೆ. ಎನ್​ಟಿಪಿಸಿ ಅಧಿಕಾರಿಗಳು ಅರ್ಹರಿಗೆ ಅವಕಾಶ ಕಲ್ಪಿಸದೆ ನೇಮಕಾತಿಯಲ್ಲಿ ಅಕ್ರಮವೆಸಗಿದ್ದಾರೆ. ಇದನ್ನು ತಾವು ಕೂಡಲೇ ಪರಿಶೀಲಿಸಿ ಭೂ ಸಂತ್ರಸ್ತರ ಮಕ್ಕಳಿಗೆ ನ್ಯಾಯ ಒದಗಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಅಜಯ ಹೂಗಾರ, ಈರಪ್ಪ ಕಾಗಲ್​, ಭೀಮನಗೌಡ ಬಿರಾದಾರ, ಹನುಮಂತ ಪಡಸಲಗಿ, ಮೋಹನಗೌಡ ಪಾಟೀಲ, ಸಲೀಂ ಇನಾಮದಾರ, ಸಿದ್ದಪ್ಪ ಮೇಲಿನಮನಿ, ಗುರುರಾಜ ಅಂಗಡಿ, ಪ್ರವಿಣ ವಾಲಿಕಾರ, ಸುನೀಲ ನಾಯಕ, ಸಚಿನ್​ ಹಡಪದ, ಮಹಾಂತೇಶ ಬಿಷ್ಟಗೊಂಡ, ದಸಗೀರ ನದ್​ಾ, ಪ್ರಮೋದ ಚವ್ಹಾಣ, ಶರಣಬಸು ಹೂಗಾರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net