

ರಾಣೆಬೆನ್ನೂರ: ಅಕ್ರಮವಾಗಿ ಪಡಿತರ ಜೋಳ ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡು ಅದರಲ್ಲಿದ್ದ 39 ಸಾವಿರ ರೂ. ಮೌಲ್ಯದ 16 ಕ್ವಿಂಟಾಲ್ ಜೋಳ ವಶಪಡಿಸಿಕೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ.
ನಗರದ ಕರಬಸಪ್ಪ ಶಿವಯೋಗೇಪ್ಪ ಹಾದರಹಳ್ಳಿ ಮತ್ತು ಜಮಾಲ್ ಸಂಶುದ್ದಿನ್ ಸುನ್ನರಖಾನ ಎಂಬುವರು ಅಶೋಕ ಲೈಲ್ಯಾಂಡ್ ವಾಹನದಲ್ಲಿ ಅಕ್ರಮವಾಗಿ ಪಡಿತರ ಜೋಳ ಸಾಗಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಆಹಾರ ನಿರೀಕ್ಷಕ ಶಂಭುಲಿಂಗ ಸೋಮನಹಳ್ಳಿ ವಾಹನ ಜಪ್ತಿ ಮಾಡಿ ಪಡಿತರ ಜೋಳ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.