

ರಬಕವಿ-ಬನಹಟ್ಟಿ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಅಕ್ಕಿ ವಾಹನ ಸಮೇತ ಓರ್ವನನ್ನು ಹೊಸೂರಿನಲ್ಲಿ ಸಂಜೆ ವಶಕ್ಕೆ ಪಡೆಯಲಾಗಿದೆ.
ರಬಕವಿ-ಬನಹಟ್ಟಿ, ತೇರದಾಳ ಹಾಗೂ ಮಹಾಲಿಂಗಪುರ ಶಹರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಹಂಚಿಕೆ ಮಾಡಿದ್ದ ಪಡಿತರ ಅಕ್ಕಿಯನ್ನು 71 ಚೀಲಗಳಷ್ಟು ಸಾರ್ವಜನಿಕರಿಂದ ಕಡಿಮೆ ಬೆಲೆಗೆ ಖರೀದಿಸಿ ಅಕ್ರಮವಾಗಿ ಮಿನಿ ಟ್ರಕ್ ವಾಹನದಲ್ಲಿ ಸಾಗಣೆ ಮಾಡಲಾಗುತ್ತಿತ್ತು. ಅಕ್ಕಿ ಸಮೇತ ಆರೋಪಿ ಹೊಸೂರಿನ ಶಿವಾನಂದ ಬಾಲಚಂದ್ರ ಕುದರಿ ಎಂಬಾತನನ್ನು ಆಹಾರ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಆಹಾರ ಇಲಾಖೆ ತಹಸೀಲ್ದಾರ್ ವಿಠ್ಠಲ ಕೂಗಾಟೆ ನೇತೃತ್ವದಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.