'ಅಕ್ರಮ ಮರಳು' ಸಿಬ್ಬಂದಿ ಜೀವಕ್ಕೇ ಕಂಟಕ *ಧ್ವನಿ ಎತ್ತದ ಜನ ಪ್ರತಿನಿಽ ಗಳು - ದಾಳಿ ವಶದ ನಾಟಕ

RAICHUR
RAICHUR
Published on

ರಾಯಚೂರು ಜಿ¯್ಲÉಯಲ್ಲಿ ಹರಿಯುವ ತುಂಗಭದ್ರಾ ಮತ್ತು ಕೃಷ್ಣಾ ನದಿಗಳು ಅಕ್ರಮ ಮರಳು ಚಟುವಟಿಕೆಯ ಕಡಲು. ಅಕ್ರಮಕ್ಕೆ ತಟೆಯೊಡ್ಡಲು ಹೋಗುವ ಸರ್ಕಾರಿ ಸಿಬ್ಬಂದಿಗೆ ಜೀವಕ್ಕೇ ಕುತ್ತು ತರುವಂಥ ರೀತಿಯಲ್ಲಿ ದಂಧೆ ಬೆಳೆದಿದ್ದರೂ ಕಡಿವಾಣ ಹಾಕಲು ಆಗದ ಸ್ಥಿತಿಯಿದೆ. ಪರಿಣಾಮ ಅಽಕಾರಿಗಳು ನದಿ ತೀರದ ಮರಳು ಗಣಿಗಾರಿಕೆ ಸ್ಥಳಕ್ಕೆ ತೆರಳಲೂ ಹಿಂಜರಿಯುತ್ತಿz್ದÁರೆ.

ಜಿ¯್ಲÉಯಲ್ಲಿ ಅಕ್ರಮ ಮರಳು ಸಾಗಣೆಗೆ ವಿರೋಽಸಿದವರ ಮೇಲೆ ಮರಳು ಸಾಗಣೆ ಲಾರಿ ಹಾಯಿಸಿ ಕೊಲೆ ಮಾಡಿದ ಪ್ರಕರಣ ಜಿ¯್ಲÉಯಲ್ಲಿ ಈ ಹಿಂದೆ ನಡೆದು ರಾಜ್ಯದ ಗಮನಸೆಳೆದಿತ್ತು. ಇದೀಗ ಅಂಥದ್ದೇ ಪ್ರಯತ್ನ ನಡೆದಿದೆ. ಭದ್ರತೆ ಒದಗಿಸುವ ಪೊಲೀಸರ ಪ್ರಾಣಕ್ಕೆ ಸಂಚಕಾರ ತಂದಿರುವುದು ಆತಂಕ ಮೂಡಿಸಿದೆ.

ಜಿ¯್ಲÉಯಲ್ಲಿ ದೊರೆಯುವ ಮರಳು ಉತ್ಕೃಷ್ಟ ಗುಣಮಟ್ಟz್ದÁಗಿದ್ದು ಅಕ್ರಮಕ್ಕೆ ದಾರಿ ಮಾಡಿದೆ. ಈ ದಂಧೆಯಲ್ಲಿ ರಾಜಕೀಯ ಹಿನ್ನೆಲೆಯವರೇ ತೊಡಗಿರುವುದು ಕಠಿಣ ಕ್ರಮಕ್ಕೆ ಮುಂದಾಗದAತೆ ತಡೆಯುತ್ತಿರುವುದು ಅಽಕಾರಿಗಳಲ್ಲಿ ಭೀತಿ ಉಂಟು ಮಾಡಿದೆ.

ಅಕ್ರಮಕ್ಕೆ ಬಲಿ-

ಜಿ¯್ಲÉಯಲ್ಲಿ ೨೦೧೮ರ ಆ.೨೩ ರ ರಾತ್ರಿ ಅಕ್ರಮ ಮರಳು ತಡೆಗೆ ಮಾನ್ವಿ ತಾಲೂಕಿನ ಚೀಕಲಪರ್ವಿ ಗ್ರಾಮದ ತುಂಗಭದ್ರಾ ನದಿ ತೀರಕ್ಲೆ ತೆರಳಿದ್ದ ಗ್ರಾಮ ಲೆಕ್ಕಾಽಕಾರಿ ಸಾಹೇಬï ಪಟೇಲï ಅವರ ಮೇಲೆಯೇ ಮರಳು ಸಾಗಿಸುತ್ತಿದ್ದ ಲಾರಿಯ ಚಾಲಕ ಲಾರಿ ಹತ್ತಿಸಿ ಕೊಲೆ ಮಾಡಿದ ಘಟನೆ ನಡೆದಿತ್ತು.

ಆ ಘಟನೆ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಅಕ್ರಮದಲ್ಲಿ ರಾಜಕೀಯ ಹಿನ್ನೆಲೆ ಯವರೇ ತೊಡಗಿರುವುದರಿಂದ ಸರ್ಕಾರ ಕಾಟಾಚಾರಕ್ಕೆ ತನಿಖೆ ನಡೆಸಿ ಕೈತೊಳೆದುಕೊಂಡಿರುವುದರಿAದ ಅಂಥದ್ದೇ ಘಟನೆಗಳು ಮರುಕಳಿಸುತ್ತಿವೆ ಎಂಬ ಆರೋಪ ಕೇಳಿಬಂದಿವೆ.

ದಾಳಿ ವಶದ ನಾಟಕ-

ವಿಎ ಕೊಲೆಯಾದ ನಂತರ ಅಕ್ರಮ ಮರಳುಗಾರಿಕೆ ತಡೆಯುವಂಥ ದಾಳಿಗಳು ನಡೆದು ಕೆಲವೆಡೆ ಟಿಪ್ಪರï ಹಾಗೂ ಜೆಸಿಬಿ ವಶಪಡಿಸಿಕೊಳ್ಳಲಾಯಿತು. ಆದರೆ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಲಿಲ್ಲ.

ರಕ್ಷಣೆಗೆ ಮನವಿ-

೨೦೨೪ ರ -É. ೧೩ ರಂದು ಅಕ್ರಮ ಮರಳುಗಾರಿಕೆ ವಿಚಾರಕ್ಕೆ ಸಂಬAಽಸಿದ ದೇವದುರ್ಗ ಶಾಸಕಿ ಜಿ.ಕರೆಮ್ಮ ನಾಯಕ ಪುತ್ರನಿಂದ ರಕ್ಷಣೆ ಕೋರಿ ದೇವದುರ್ಗ ಠಾಣೆಯ ಪೊಲೀಸರು ಜಿ¯್ಲÁ ಪೊಲೀಸï ವರಿಷ್ಠಾಽಕಾರಿಗೆ ಮನವಿ ಸಲ್ಲಿಸಿದಾಗ ಸಮಾಧಾನಪಡಿಸುವ ಕೆಲಸವೇ ಆಯಿತು.

ಆನಂತರ ಅಲ್ಲಿಲ್ಲಿ ಅಕ್ರಮ ಮರಳಿನ ವಿರುದ್ಧ ದನಿ ಎತ್ತಿದರೆ ಆರೋಪ ಮಾಡಿದವರಿಗೆ ಬೆದರಿಕೆಯೊಡ್ಡುವುದು, ಪೊಲೀಸï ಠಾಣೆಯಲ್ಲಿ ಜಪ್ತಿ ಮಾಡಿ ತಂದಿರಿಸಿದ ಮರಳು ರಾತ್ರೋರಾತ್ರಿ ಕಳವಿನಂಥ ಅನೇಕ ಪ್ರಕರಗಳು ನಡೆದರೂ ರಾಜಕೀಯ ಪ್ರಭಾವ ಬಳಸಿ ಪರಿಸ್ಥಿತಿ ನಿಭಾಯಿಸುವ ಕಾರ್ಯ ಮಾಡಲಾಯಿತೇ ವಿನಾಃ ತಪ್ಪೆಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದು ತೀರಾ ಕಡಿಮೆ.

ಈಗ ಅದೇ ಮಾನ್ವಿ ತಾಲೂಕಿನ ಚೀಕಲಪರ್ವಿ ಬಳಿಯೇ ಅಕ್ರಮ ಮರಳು ಸಾಗಿಸುತ್ತಿದ್ದ ವಾಹನವನ್ನು ತಪಾಸಣೆಗೆ ಮುಂದಾದ ಕಾನ್ಸಟೆಬಲï ಲಕ್ಷ್ಮಣಗೆ ಗುದ್ದಿ ಗಾಯಗೊಳಿಸಿದ್ದು ಅಕ್ರಮ ಮರಳು ಶಾಶ್ವತವಾಗಿಯೇ ಮುಂದುವರಿಯುವ ಲಕ್ಷಣಕ್ಕೆ ಸಾಕ್ಷಿಯಾಗಿದೆ. ಈ ನಿಟ್ಟಿನಲ್ಲಿ ಅಕ್ರಮ ಮರಳು ತಡೆಯಲು ಗಣಿ ಮತ್ತು ಭೂ ವಿe್ಞÁನ ಇಲಾಖೆ ಅಽಕಾರಿಗಳು ಭಯಭೀತರಾಗಿz್ದÁರೆ.

ಈ ಬಗ್ಗೆ ಧ್ವನಿ ಎತ್ತದ ಜನ ಪ್ರತಿನಿಽ ಗಳು ಆಡಳಿರೂಢ ಹಾಗೂ ವಿರೋಧ ಪಕ್ಷಗಳ ರಾಜಕೀಯ ನಾಯಕರುಗಳ ಬೆಂಬಲಿಗರೇ ಈ ಮರಳು ದಂಧೆಯಲ್ಲಿದ್ದು ನಿಯಂತ್ರಣ ಅಸಾಧ್ಯ ಎಂಬAತಾಗಿದೆ. ಅಽಕಾರಿಗಳೂ ಸಹ ಅಕ್ರಮ ಮರಳಿನ ಮಾಫಿಯಾದ ಎದುರು ಕಾರ್ಯಾಚರಣೆ ನಡೆಸಲೂ ಹಿಂದೇಟು ಹಾಕುತ್ತಿರುವುದು ಕಾರ್ಯವೈಖರಿ ಬಗ್ಗೆಯೇ ಶಂಕೆ ಮೂಡಿಸಿದೆ. ಮತ್ತೊಂದು ಜೀವ ಅಕ್ರಮ ಗಣಿಗಾರಿಕೆಗೆ ಬಲಿಯಾಗುವ ಮೊದಲು ಸರ್ಕಾರ ಕಠಿಣ ನಿರ್ಣಯಕ್ಕೆ ಬರಬೇಕಿದೆ.

ಜಿ¯್ಲÉಯಲ್ಲಿ ಆಕ್ರಮ ಮರಳು ತಡೆಯಲು ಸಾಕಷ್ಟು ಪ್ರಯತ್ನ ಮಾಡಲಾಗುತ್ತಿದೆ. ಅನೇಕ ಬಾರಿ ಇಲಾಖೆ ಸಿಬ್ಬಂದಿ ಮೇಲೆ ಹ¯್ಲÉ ನಡೆಸಿದ ಉದಾಹರಣೆಗಳು ಇವೆ. ಈ ಬಗ್ಗೆ ಜಿ¯್ಲÁ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗುವುದು.

- ಪುಷ್ಪಲತಾ ಎಸ್.ಕವಲೂರು, ಹಿರಿಯ ಭೂ ವಿe್ಞÁನಿ ಗಣಿ ಮತ್ತು ಭೂ ವಿe್ಞÁನ ಇಲಾಖೆ ರಾಯಚೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net