ಮರಳು ಅಕ್ರಮ ಸಾಗಾಟ-ಬಂಧನ

24bkl2
Published on

ಭಟ್ಕಳ: ತಾಲೂಕಿನ ಗೊರಟೆ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದವನನ್ನು ಗ್ರಾಮೀಣ ಪೊಲೀಸರು ಬಂಧಿಸಿ, ಮರಳು ಸಾಗಾಟಕ್ಕೆ ಬಳಸಲಾಗುತ್ತಿದ್ದ ಟಾಟಾ ಏಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಗೋರಟೆ ಗ್ರಾಮದ ನಿವಾಸಿ ರಮೇಶ ಮಂಜುನಾಥ ನಾಯ್ಕ (43) ಬಂಧಿತ ಆರೋಪಿ. ಮಂಗಳವಾರ ಬೆಳಗ್ಗೆ ಗ್ರಾಮದ ಬಳಿ ತಪಾಸಣೆ ನಡೆಸಿದ ಪೊಲೀಸರು ಟಾಟಾ ಏಸ್ ನಲ್ಲಿ ಸಾಗಿಸುತ್ತಿದ್ದ ಮರಳನ್ನು ವಶಪಡಿಸಿಕೊಂಡು, ಆರೋಪಿಯನ್ನು ಸ್ಥಳದಲ್ಲೇ ಬಂಧಿಸಿದ್ದಾರೆ. ನೇತೃತ್ವದಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net