ಅಕ್ರಮ ಮರಳು ಸಾಗಾಟ ಚಾಲಕನ ಬಂಧನ

arrested
Published on

ಮಂಗಳೂರು : ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಸಹಿತ ಚಾಲಕನನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೊಹಮ್ಮದ್ ನಿಜಾಂ ಯಾನೇ ನಿಜ್ಜು ಬಂಧಿತ ಆರೋಪಿ. ಬುಧವಾರ ಬೆಳಗ್ಗೆ ಕಣ್ಣೂರು ಕಡೆಯಿಂದ ಬಂದ ಪಿಕಪ್ ವಾಹನವನ್ನು ಪಡೀಲ್‌ನ ಪೊಲೀಸ್ ಚೆಕ್‌ಪೋಸ್ಟ್ ಬಳಿ ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಪಿಕಪ್‌ನಲ್ಲಿ ಮರಳು ಸಾಗಾಟ ಮಾಡುವುದು ಕಂಡು ಬಂದಿದ್ದು, ಪರವಾನಗಿಗಾಗಿ ವಿಚಾರಿಸಿದಾಗ ಆತನಲ್ಲಿ ಯಾವುದೇ ಪರವಾನಗಿ ಇರಲಿಲ್ಲ. ವಿಚಾರಣೆ ವೇಳೆ ಅರ್ಕುಳ ಮೈದಾನದಿಂದ ಮರಳು ತುಂಬಿಸಿ ತಂದಿರುವುದಾಗಿ ತಿಳಿಸಿದ್ದಾನೆ. 4 ಲಕ್ಷ ರೂ. ಮೌಲ್ಯದ ಪಿಕಪ್ ವಾಹನ ಸಹಿತ 2,500 ರೂ. ಮೌಲ್ಯದ ಮರಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಸರ್ಕಾರಕ್ಕೆ ರಾಜಧನ ಪಾವತಿಸದೆ ಅಕ್ರಮವಾಗಿ ಮರಳು ಸಾಗಾಟ ಮಾಡಿರುವ ಬಗ್ಗೆ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net