

ಹಾವೇರಿ: ತುಂಗಭದ್ರಾ ನದಿಪಾತ್ರದಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ಅನ್ನು ಜಪ್ತಿ ಮಾಡಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ ಟನೆ ತಾಲೂಕಿನ ಕಾಟೇನಹಳ್ಳಿ ಬಳಿ ಬುಧವಾರ ನಡೆದಿದೆ.
ತಾಲೂಕಿನ ಗಳಗನಾಥ ಗ್ರಾಮದ ದುರುಗೇಶ ಮಲ್ಲಪ್ಪ ಗಡ್ಡೆಪ್ಪನವರ ಹಾಗೂ ದೇವರಾಜಪಸರಪ್ಪ ಹವಳಪ್ಪನವರ ಬಂಧಿತರು.
ಇವರು ಗಳಗನಾಥ ಗ್ರಾಮದ ಬಳಿಯ ತುಂಗಭದ್ರಾ ನದಿಪಾತ್ರದಿಂದ ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಾಟ ಮಾಡುತ್ತಿದ್ದ ಸಮಯದಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಟಿಪ್ಪರ್ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.