

ಲಕ್ಷ್ಮೇಶ್ವರ: ತಾಲೂಕು ವ್ಯಾಪ್ತಿಯ ಅಕ್ಕಿಗುಂದ, ಬಟ್ಟೂರ, ಬಡ್ನಿ, ಅಮರಾಪುರ, ಹುಲ್ಲೂರು, ಅದರಹಳ್ಳಿ, ಕೊಗನೂರ ಗ್ರಾಮ ವ್ಯಾಪ್ತಿಯ ಸರ್ಕಾರಿ ಹಳ್ಳ, ಮಾಲ್ಕೀ ಜಮೀನಿನಲ್ಲಿ ಮರಳು ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ಇದನ್ನು ತಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಜಿಲ್ಲಾದ್ಯಕ್ಷ ಶರಣು ಗೋಡಿ ನೇತೃತ್ವದಲ್ಲಿ ತಹಸೀಲ್ದಾರ್ ವಾಸುದೇವ ಸ್ವಾಮಿ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ತಾಲೂಕಿನಲ್ಲಿ ಮರಳು ಅಕ್ರಮ ಸಾಗಾಟ ಅವ್ಯಾಹತವಾಗಿದೆ. ಮರಳು ಸಾಗಿಸುವ ಟಿಪ್ಪರ್ ಮತ್ತು ಲಾರಿಗಳು ಪಾಸ್ ತೆಗೆದುಕೊಂಡರೂ ಒಂದೇ ಪಾಸ್‌ನಲ್ಲಿ ಎಲ್ಲ ಕಡೆ ಸಾಗಾಟ ಮಾಡುತ್ತಿವೆ. ಲಾರಿ ಮತ್ತು ಟಿಪ್ಪರ್‌ಗಳಿಗೆ ಜಿಪಿಎಸ್ ಇದ್ದರೂ ಸಹ ನಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಕಣ್ಣು ತಪ್ಪಿಸಿ ಜಿಪಿಎಸ್ ಬಂದ್ ಮಾಡಿ ಬೊಕ್ಕಸಕ್ಕೆ ನಷ್ಟ ಮಾಡುತ್ತಿದ್ದಾರೆ. ಇದನ್ನು ತಡೆ ತಡೆಹಿಡಿಬೇಕಾದ ಟಾಸ್ಕ್ ಪೋರ್ಸ್ ಕಮಿಟಿ ಕಣ್ಣಿದ್ದೂ ಕುರುಡಾಗಿದೆ. ದಂಧೆಕೋರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದರೆ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಕರವೇ ಸ್ವಾಭಿಮಾನಿ ಸೇನೆ ತಾಲೂಕಾಧ್ಯಕ್ಷ ನಾಗೇಶ ಅಮರಾಪುರ, ಜಿಲ್ಲಾ ಕಾರ್ಯದ್ಯಕ್ಷ ಇಸ್ಮಾಯಿಲ್ ಆಡೂರ, ಪ್ರವೀಣ ಆಚಾರಿ, ಯಲ್ಲಪ್ಪ ಹಂಜಗಿ, ಕೈಸರ ಮಹಮ್ಮದ ಅಲಿ, ಅಭಿಷೇಕ ಸಾತಪುತೆ, ದುದ್ದು ಅಕ್ಕಿ, ನಾಸೀರ ಸಿದ್ದಿ, ಸುಲೇಮಾನ ಬಾರಿಗಿಡದ, ಮುಕ್ತಿಯಾರ ಜಮಖಂಡಿ, ನದಿಮ್ ಕುಂದಗೋಳ ಇದ್ದರು.